Bengaluru 20°C

ತುಳು ಚಿತ್ರ ನಿರ್ಮಾಣಕ್ಕೆ ಇಳಿದ ನಟ ಗೋಲ್ಡನ್ ಸ್ಟಾರ್ ಗಣೇಶ್!

ತುಳು ಚಿತ್ರ ನಿರ್ಮಾಣಕ್ಕೆ ನಟ ಗೋಲ್ಡನ್ ಸ್ಟಾರ್ ಗಣೇಶ್ ಇಳಿದಿದ್ದು, ಗೋಲ್ಡನ್ ಮೂವೀಸ್ ಪ್ರೊಡಕ್ಷನ್ ನಲ್ಲಿ ಮೊದಲ ತುಳು ಚಿತ್ರ ನಿರ್ಮಾಣವಾಗುತ್ತಿದೆ. ಮಂಗಳೂರಿನಲ್ಲಿ ಹೊಸ ತುಳು ಸಿನಿಮಾಕ್ಕೆ ಮುಹೂರ್ತ ಕಾರ್ಯಕ್ರಮ ನಡೆಯಿತು.

ಮಂಗಳೂರು : ತುಳು ಚಿತ್ರ ನಿರ್ಮಾಣಕ್ಕೆ ನಟ ಗೋಲ್ಡನ್ ಸ್ಟಾರ್ ಗಣೇಶ್ ಇಳಿದಿದ್ದು, ಗೋಲ್ಡನ್ ಮೂವೀಸ್ ಪ್ರೊಡಕ್ಷನ್ ನಲ್ಲಿ ಮೊದಲ ತುಳು ಚಿತ್ರ ನಿರ್ಮಾಣವಾಗುತ್ತಿದೆ. ಮಂಗಳೂರಿನಲ್ಲಿ ಹೊಸ ತುಳು ಸಿನಿಮಾಕ್ಕೆ ಮುಹೂರ್ತ ಕಾರ್ಯಕ್ರಮ ನಡೆಯಿತು.


ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಮುಹೂರ್ತ ಕಾರ್ಯಕ್ರಮ ನಡೆಯಿತು. ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಭಾಗಿಯಾದರು. ಶಿಲ್ಪಾ ಗಣೇಶ್ ನಿರ್ಮಾಣದ ಗೋಲ್ಡನ್ ಮೂವೀಸ್ ಸಂಸ್ಥೆಯಾಗಿದ್ದು, ಗೋಲ್ಡನ್ ಮೂವೀಸ್ ಪ್ರೊಡಕ್ಷನ್ ನಲ್ಲಿ ಮೊದಲ ತುಳು ಸಿನಿಮಾವಾಗಿದೆ.


ಸಂದೀಪ್ ಬೆದ್ರ ನಿರ್ದೇಶನದ ಹೊಸ ತುಳು ಸಿನಿಮಾವಾಗಿದ್ದು, ಸಿನಿಮಾದಲ್ಲಿ ನಾಯಕನಾಗಿ ನಿತ್ಯ ಪ್ರಕಾಶ್ ಬಂಟ್ವಾಳ, ನಾಯಕಿಯಾಗಿ ಅಮೃತ ನಾಯಕ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಗೋಕರ್ಣ ನಾಥ ದೇವರಿಗೆ ಚಿತ್ರತಂಡ ವಿಶೇಷ ಪೂಜೆ‌‌ ಸಲ್ಲಿಸಿದರು.


ಗೋಲ್ಡ್ ಪಿಂಚ್ ಪ್ರಕಾಶ್ ಶೆಟ್ಟಿ ಅವರಿಂದ ಚಿತ್ರಕ್ಕೆ ಕ್ಲ್ಯಾಪ್, ಮುಹೂರ್ತ ಕಾರ್ಯಕ್ರಮದಲ್ಲಿ ಮಾಜಿ‌ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಸಂಸದ ಕ್ಯಾ.ಬ್ರಿಜೇಶ್ ಚೌಟ ಸೇರಿದಂತೆ ಶಾಸಕ ವೇದವ್ಯಾಸ್ ಕಾಮತ ಜನಪ್ರತಿನಿಧಿಗಳು, ಗಣ್ಯರು ಭಾಗಿ ಶಾಸಕ ವೇದವ್ಯಾಸ್ ಕಾಮತ್ ಚಿತ್ರ ತಂಡಕ್ಕೆ ಶುಭಹರಿಸಿದರು.


Nk Channel Final 21 09 2023