ಮನರಂಜನೆ

“ಗೌಜಿ ಗಮ್ಮತ್” ಎಪ್ರಿಲ್ 14ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

ಮೋವಿನ್ ಫಿಲಂಮ್ಸ್ ಲಾಂಛನ ದಲ್ಲಿ ಮೋಹನ್ ಭಟ್ಕಳ್, ವಿನಾಯಕ್ ತೀರ್ಥಹಳ್ಳಿ ನಿರ್ಮಾಣದಲ್ಲಿ, ಮಣಿ ಎಜೆ ಕಾರ್ತಿಕೇಯನ್ ನಿರ್ದೇಶನದಲ್ಲಿ ತಯಾರಾದ ಗೌಜಿ ಗಮ್ಮತ್ ತುಳು ಸಿನಿಮಾ ಎಪ್ರಿಲ್ ೧೪ ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.

ಉಡುಪಿ, ಮಂಗಳೂರು, ಮಣಿ ಪಾಲ, ಕಾರ್ಕಳ ಮೊದಲಾದ ಕಡೆ ಗಳಲ್ಲಿ ಗೌಜಿ ಗಮ್ಮತ್ ಸಿನಿಮಾಕ್ಕೆ ಒಂದೇ ಹಂತದಲ್ಲಿ ೧೯ ದಿನಗಳ ಕಾಲ ಚಿತ್ರೀಕರಣ ನಡೆದಿತ್ತು. ಸಿನಿಮಾಕ್ಕೆ ಯುಎ ಸರ್ಟಿಫಿಕೇಟ್ ದೊರೆತಿದೆ. ಗೌಜಿ ಗಮ್ಮತ್ ಸಿನಿಮಾ ಹಾಸ್ಯ ಮನ ರಂಜನೆಯ ಚಿತ್ರ. ಈಗಿನ ಪೀಳಿಗೆ ಇಷ್ಟ ಪಡುವ ಕತೆಯನ್ನು ಇಲ್ಲಿ ಹಾಸ್ಯಭರಿ ತವಾಗಿ ನಿರ್ದೇಶಕರು ಹೆಣೆದಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶವೂ ಈ ಸಿನಿಮಾದಲ್ಲಿದೆ ಎನ್ನುತ್ತಾರೆ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಮೋಹನ್ ಭಟ್ಕಳ್.

ಗೌಜಿ ಗಮ್ಮತ್ ಹೆಸರು ಸೂಚಿಸು ವಂತೆ ಇದು ಹಾಸ್ಯ ಪ್ರಧಾನ ಸಿನಿಮಾ. ಪ್ರೇಕ್ಷಕರ ನಾಡಿಮಿಡಿತವನ್ನು ಅರಿತು ನಿರ್ದೇಶಕ ಮಣಿ ಎಜೆ ಕಾರ್ತಿಕೇಯ ನ್ ಕಥೆ ಬರೆದು ನಿರ್ದೇಶನ ಮಾಡಿ ದ್ದಾರೆ. ಚಿತ್ರಕಥೆ, ಸಂಭಾಷಣೆಯನ್ನು ಸಂದೀಪ್ ಬೆದ್ರ ಬರೆದಿದ್ದಾರೆ. ತಾರಾಬಳಗದಲ್ಲಿ ಖ್ಯಾತ ನಾಮ ಕಲಾವಿದರಿದ್ದಾರೆ. ಮುಖ್ಯವಾಗಿ ತೆಲಿ ಕೆದ ಬೊಳ್ಳಿ ಡಾ. ದೇವದಾಸ್ ಕಾಪಿ ಕಾಡ್, ಕುಸಲ್ದರಸೆ ನವೀನ್ ಡಿ. ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ಪ್ರಮುಖ ಪಾತ್ರದಲ್ಲಿದ್ದಾರೆ.

ನಾಯಕ ನಟನಾಗಿ ಕರ್ಣ ಉದ್ಯಾವರ್, ನಾಯಕಿಯಾಗಿ ಸ್ವಾತಿ ಪ್ರಕಾಶ್ ಶೆಟ್ಟಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಪ್ರಸನ್ನ ಶೆಟ್ಟಿ ಬೈಲೂ ರ್, ಉಮೇಶ್ ಮಿಜಾರ್, ಜಯ ಶೀಲಾ ಮರೋಳಿ, ಪ್ರಭಾಕರ್ ಬ್ರಹ್ಮಾ ವರ, ಚಂದ್ರಹಾಸ ಶೆಟ್ಟಿ ಮಾಣಿ, ಸುಜಾತ ಶಕ್ತಿನಗರ, ಕಿಶೋರ್ ಶೆಟ್ಟಿ ಪಿಲಾರ್, ಹರೀಶ್ ಪೂಜಾರಿ ಕಡ್ತಲ, ಹರೀಶ್ಚಂದ್ರ ಪೆರಾಡಿ, ಪ್ರಭಾಕರ್ ಆಚಾರ್‍ಯ ಮೂಡುಬೆಳ್ಳೆ, ಅಶ್ವತ್ ಶೆಟ್ಟಿ, ವಿಕ್ಕಿ ರಾವ್ ಮಿರ್ಚಿ, ಸಂದೇಶ್ ದೇವಾಡಿಗ ಅಶ್ವತ್ಥಪುರ, ಶಿವರಾಮ್ ವಿಟ್ಲ, ರಾಧಿಕಾ ಭಟ್, ವನಿತಾ ಸುವರ್ಣ, ನರಸಿಂಹ ನಾಯಕ್, ರಶ್ಮಿತಾ ಸಾಲಿಯಾನ್ ಪಿಲಾರ್, ಸುರಕ್ಷಾ ಕೋಟ್ಯಾನ್ ಪಿಲಾರ್, ಲೊಕೇಶ್ ಮಾಣಿಲ, ಅನುಷಾ ಶೆಟ್ಟಿ, ಬೇಬಿ ಚಿತ್ರಿತಾ ದೇವಾಡಿಗ ಹಳೆಯಂ ಗಡಿ, ಲೊಕೇಶ್ ಶೆಟ್ಟಿ, ಜ್ಞಾನೇಶ್ ಆಚಾರ್‍ಯ, ಶಶಿರಾಜ್ ಆಚಾರ್‍ಯ, ಮಧು ಪೂಜಾರಿ ವಿಷ್ಣುನಗರ, ನಿಲೇಶ್ ಶೆಟ್ಟಿ ಇನ್ನು ಮೊದಲಾದವರಿದ್ದಾರೆ.

ತಂತ್ರಜ್ಞಾ ನ ವಿಭಾಗದಲ್ಲಿ ವಸ್ತ್ರಾಲಂಕಾರ -ರಾಮ ದಾಸ್ ಸಸಿಹಿತ್ಲು, ಕಲೆ -ಕೃಷ್ಣ, ನಿರ್ದೇ ಶನ ತಂಡ – ರಾಮದಾಸ್ ಸಸಿಹಿತ್ಲು, ಕರ್ಣ ಉದ್ಯಾವರ್, ಗೌರವ್ ರೈ, ಛಾಯಗ್ರಹಣ ಸಹಾಯ – ವೇಣು ಗೋಪಾಲ್, ಮೇಕಪ್ – ಮಂಜುನಾಥ್ ಶೆಟ್ಟಿಗಾರ್ ಮುಂಬೈ, ಸಂಕಲನ – ಮೇವಿನ್ ಜೋಯಲ್ ಪಿಂಟೋ, ಸಾಹಿತ್ಯ – ಕಿಶೋರ್ ಮೂಡಬಿದಿರೆ, ಮಯೂರ್ ನಾಯ್ಗ, ಸಂದೀಪ್ ಬೆದ್ರ, ಸಂಗೀತ- ಸಾಮುವೆಲ್ ಎಬಿ, ಸಹ ನಿರ್ದೇಶಕ – ಸಂದೀಪ್ ಬೆದ್ರ, ಎಕ್ಸ್‌ಕ್ಯೂಟಿವ್ ಪ್ರೊಡ್ಯುಸರ್ – ತುಷಾರ್ ಸುರತ್ಕಲ್, ಸಂಗೀತ ಸ್ಯಾಮುವಲ್ ಎಬಿ, ಛಾಯಾ ಗ್ರಹಣ -ವಿ.ರಾಮಾಂಜನೇಯ, ಚಿತ್ರ ಕಥೆ -ಸಂಭಾಷಣೆ- ಸಂದೀಪ್ ಬೆದ್ರ, ನಿರ್ಮಾಪಕರು – ಮೋಹನ್ ಭಟ್ಕ ಳ್, ವಿನಾಯಕ್ ತೀರ್ಥಹಳ್ಳಿ, ಕಥೆ – ನಿರ್ದೇಶನ – ಮಣಿ ಎಜೆ. ಕಾರ್ತಿ ಕೇಯನ್. ಕಥಾ ಸಾರಾಂಶ – ಸುಂದ ರ ಕೌಟುಂಬಿಕ ಹಾಸ್ಯವನ್ನಾಧಾರಿತ ಕಥಾ ಹಂದರವಿರುವ ಚಿತ್ರ ಗೌಜಿ ಗಮ್ಮತ್. ಒಂದು ಸಂಸಾರದಲ್ಲಿ ವಿವಿಧ ರೀತಿಯ ಮನಸ್ಥಿತಿಗಳಿರುತ್ತದೆ. ನಾನು ಹೇಳಿದ್ದೇ ಸರಿ, ತಾನು ಮಾಡಿದ್ದೇ ಸರಿ ಎಂಬ ಸ್ಫರ್ಧಾತ್ಮಕ ವ್ಯಕ್ತಿತ್ವಗಳಿರುತ್ತದೆ. ಅದು ಸಮಾಜಕ್ಕೆ ಕೆಲವೊಮ್ಮೆ ಹಾಸ್ಯ ವಾಗಿ ಕಾಣುತ್ತದೆ, ಕೆಲವೊಮ್ಮೆ ಗಂಭೀರವಾಗಿ ಕಾಣುತ್ತದೆ. ಆದರೆ ಆ ಮನಸ್ಥಿತಿಗಳಿಗಿರುವ ಭಾವನೆಗಳು ಕೆಲವೊಮ್ಮೆ ಮನ ಮುಟ್ಟುವಂತಿರುತ್ತದೆ. ಆ ಭಾವನೆಗಳು ಮತ್ತು ಭಾವನೆಗಳ ಉದ್ದೇಶಗಳು ಹಾಗೂ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಆ ಪಾತ್ರಗಳು ಹೇಗೆ ಬಗೆಹರಿಸುತ್ತದೆ ಎಂಬುದನ್ನು ಹಾಸ್ಯ ಮಿಶ್ರಿತವಾಗಿ ತೋರುವ ಕಥೆಯೇ ಗೌಜಿ ಗಮ್ಮತ್.

Gayathri SG

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

36 mins ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

54 mins ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

1 hour ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

1 hour ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

2 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

2 hours ago