Bengaluru 29°C
Ad

ʻಓಟಿಟಿಗೆ ಬರಲಿದೆ ಗ್ಯಾಂಗ್ಸ್‌ ಆಫ್‌ ಗೋದಾವರಿʼ ಸಿನಿಮಾ

ಇತ್ತೀಚೆಗಿನ ದಿನಗಳಲ್ಲಿ ಸಿನಿಮಾವೊಂದು ಥಿಯೇಟರ್‌ ನಲ್ಲಿ ಸೋತರೆ, ಓಟಿಟಿಯಲ್ಲಿ ರಿಲೀಸ್‌ ಆಗಿ ಅಲ್ಲಿ ಮೆಚ್ಚುಗೆ ಪಡೆದುಕೊಳ್ಳುವ ಸಾಧ್ಯತೆಯಿರುತ್ತದೆ. ಟಾಲಿವುಡ್‌ ನಲ್ಲಿ ಎರಡು ವಾರದ ಹಿಂದಷ್ಟೇ ರಿಲೀಸ್‌ ಆಗಿದ್ದ ಸಿನಿಮಾವೊಂದು ದಿಢೀರ್‌ ನೇ ಓಟಿಟಿಗೆ ಬರುತ್ತಿದೆ.

ಹೈದರಾಬಾದ್:‌ ಇತ್ತೀಚೆಗಿನ ದಿನಗಳಲ್ಲಿ ಸಿನಿಮಾವೊಂದು ಥಿಯೇಟರ್‌ ನಲ್ಲಿ ಸೋತರೆ, ಓಟಿಟಿಯಲ್ಲಿ ರಿಲೀಸ್‌ ಆಗಿ ಅಲ್ಲಿ ಮೆಚ್ಚುಗೆ ಪಡೆದುಕೊಳ್ಳುವ ಸಾಧ್ಯತೆಯಿರುತ್ತದೆ. ಟಾಲಿವುಡ್‌ ನಲ್ಲಿ ಎರಡು ವಾರದ ಹಿಂದಷ್ಟೇ ರಿಲೀಸ್‌ ಆಗಿದ್ದ ಸಿನಿಮಾವೊಂದು ದಿಢೀರ್‌ ನೇ ಓಟಿಟಿಗೆ ಬರುತ್ತಿದೆ.

ನಟ ವಿಶ್ವಕ್ ಸೇನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ʼಗ್ಯಾಂಗ್ಸ್‌ ಆಫ್‌ ಗೋದಾವರಿʼ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಟ್ರೇಲರ್‌ ನೋಡಿ ಸಿನಿಮಾವೇನೋ ಮ್ಯಾಜಿಕ್‌ ಮಾಡಬಹುದೆಂದು ಎನ್ನಲಾಗುತ್ತಿತ್ತು.

ಪ್ರೀ ರಿಲೀಸ್‌ ಇವೆಂಟ್‌ನಲ್ಲಿ ಹಿರಿಯ ನಟ ಬಾಲಯ್ಯ ನಟಿ ಅಂಜಲಿ ಅವರೊಂದಿಗೆ ವರ್ತಿಸಿದ ರೀತಿಗೆ ಅನೇಕರು ಟೀಕಿಸಿದ್ದರು. ಈ ವಿಚಾರದಲ್ಲಿ ʼಗ್ಯಾಂಗ್ಸ್‌ ಆಫ್‌ ಗೋದಾವರಿʼ ಚಿತ್ರತಂಡ ಸುದ್ದಿಯಾಗಿತ್ತು. ಆದರೆ ಮೇ.31 ರಂದು ಥಿಯೇಟರ್‌ ಗೆ ಎಂಟ್ರಿ ಕೊಟ್ಟ ʼಗ್ಯಾಂಗ್ಸ್‌ ಆಫ್‌ ಗೋದಾವರಿʼ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.

Ad
Ad
Nk Channel Final 21 09 2023
Ad