ಮಂಗಳೂರು : ಜೈ ಸಿನೆಮಾದಲ್ಲಿ ನಟಿಸಲು ಮಂಗಳೂರಿಗೆ ಅಗಮಿಸಿರುವ ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ಮಾದ್ಯಮದ ಜೊತೆ ಮನ ಬಿಚ್ಚಿ ಮಾತನಾಡಿದ್ದಾರೆ. ಜೈ ಸಿನೆಮಾದಲ್ಲಿ ಪ್ರಮುಖ ಸೀನ್ ಒಂದರಲ್ಲಿ ಪಾತ್ರ ನಿರ್ವಹಿಸುತ್ತಿರುವ ಸುನೀಲ್ ಶೆಟ್ಟಿ, ತುಳು ಸಿನೆಮಾ ಹಾಗೂ ತುಳುನಾಡಿನ ಪರಿಸರ ಹಾಗೂ ಇಲ್ಲಿನ ಸೊಗಡಿನ ಕಂಪನ್ನು ವಿಶ್ವಕ್ಕೆ ಪರಿಚಯಿಸುವ ವಿಚಾರವಾಗಿ ಮಾತನಾಡಿದ್ದಾರೆ. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ತುಳುನಾಡಿನ ಜನರ ಗೌರವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ತುಳು ಸಿನೆಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ ಬಗ್ಗೆ ಸಂತಸ ವ್ಯಕ್ತ ಪಡಿಸಿದ ಸುನೀಲ್ ಶೆಟ್ಟಿ ರೂಪೇಶ್ ಶೆಟ್ಟಿ ಸಿನೆಮಾದಲ್ಲಿ ನಟಿಸಲು ಯಾಕೆ ಒಪ್ಪಿದೆ ಎಂಬ ವಿಚಾರವನ್ನೂ ಹಂಚಿಕೊಂಡಿದ್ದಾರೆ. ಬಿಗ್ ಬಜೆಟ್ ಸಿನೆಮಾದಿಂದಲೂ ಬಿಗ್ ಎಫರ್ಟ್ ಸಿನೆಮಾವನ್ನು ಜನ ಮೆಚ್ಚುತ್ತಾರೆ ಎಂದ ಸುನೀಲ್ ಶೆಟ್ಟಿ ತನ್ನ 150 ಸಿನೆಮಾದಲ್ಲಿ 50 ಸಿನೆಮಾ ಸೋತಿರುವುದನ್ನು ನೆನಪಿಸಿಕೊಂಡಿದ್ದಾರೆ.
ಸಿನೆಮಾಗೆ ಭಾಷೆಯ ಲಿಮಿಟ್ ಇಲ್ಲ ಇದು ಭಾಷೆಯನ್ನೂ ಮೀರಿದ ವಿಚಾರ . ಹೀಗಾಗಿ ತುಳು ಸಿನೆಮಾ ಸಣ್ಣ ಇಂಡಸ್ಟ್ರಿ ಎಂಬ ಕೀಳಿರೆಮೆ ಬಿಟ್ಟು ಉತ್ತಮ ಕಥೆ ಇದ್ರೆ ಅದು ಹಿಂದಿಗೂ ರಿಮೇಕ್ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದಕ್ಕೆ ಮಲೆಯಾಳಂ ಸಿನೆಮಾ ರಾಮ್ ಜೀ ರಾವ್ ಸ್ಪೀಪಿಂಗ್ ಹಿಂದಿಯಲ್ಲಿ ಹೇರಾಪೇರಿಯಾಗಿ ಹೇಗೆ ಸುಪರ್ ಹಿಟ್ ಆಯಿತು ಎಂಬ ಉದಾಹರಣೆ ನೀಡಿದ್ದಾರೆ.
ಸಿನೆಮಾ ನಿರ್ದೇಶನದ ಜೊತೆಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ ರೂಪೇಶ್ ಶೆಟ್ಟಿ ಸುನೀಲ್ ಶೆಟ್ಟಿ ಅವರಿಗೆ ಅ್ಯಕ್ಷನ್ ಕಟ್ ಹೇಳಲು ಪಡುತ್ತಿರುವ ಕಷ್ಟ ಹಾಗೂ ಅದಕ್ಕೆ ಸುನೀಲ್ ಶೆಟ್ಟಿ ಅವರ ರಿಯಾಕ್ಷನ್ ಬಗ್ಗೆ ಮಾತನಾಡಿದ್ದಾರೆ. ಮಹಾನ್ ನಾಯಕನಾದ್ರೂ ಇವರ ಸಿಂಪ್ಲಿಸಿಟಿ ಹಾಗೂ ನಡವಳಿಕೆಯಿಂದ ಕಲಾವಿಧರು ಸಾಕಷ್ಟು ಕಲಿಯೋದಿದೆ ಅಂತ ಹೇಳಿದ್ದಾರೆ.
ಸಿನೆಮಾಗೆ ಭಾಷೆಯ ಹಂಗಿಲ್ಲ ಎಂದು ಹೇಳಿದ ಸುನೀಲ್ ಶೆಟ್ಟಿ ಒಟಿಟಿ ಇಂದು ಪ್ರತಿ ಮನೆ ತಲುಪುತ್ತಿದ್ದು, ಅದನ್ನು ಗಮನದಲ್ಲಿಟ್ಟು ಸಿನೆಮಾ ಮಾಡಬೇಕು. ಭಾಷೆಗಿಂತಲೂ ಕಥೆ ಹಾಗೂ ಕಲಾವಿಧ ಸಿನೆಮವನ್ನು ಗೆಲ್ಲಿಸಬಲ್ಲದು.
ಹೀಗಾಗಿ ಮಾರ್ಕೆಟ್ ಕಡಿಮೆ ಇದ್ರೂ ತುಳು ಸಿನೆಮಾ ಅಭಿಮಾನಿಗಳನ್ನ ತಲುಪಲು ಸಾಧ್ಯ ಎಂದು ಹೇಳಿದರು. ಇದೇ ಮೊದಲ ಬಾರಿಗೆ ಬಾಲಿವುಡ್ ಸುಪರ್ ಸ್ಟಾರ್ ಒಬ್ಬರು ತುಳು ಸಿನೆಮಾದಲ್ಲಿ ನಟಿಸ್ತಾ ಇದ್ದಾರೆ. ಇದು ಜೈ ಸಿನೆಮಾ ತಂಡಕ್ಕೆ ಹೆಮ್ಮೆಯ ವಿಚಾರವಾಗಿದ್ದು ಇದನ್ನು ಇಡೀ ತುಳು ಸಿನಿ ಇಂಡಸ್ಟ್ರಿ ಗೆ ಸಮರ್ಪಿಸಿದ್ದಾರೆ.