Ad

ನ್ಯೂ ಲುಕ್‌ನಲ್ಲಿ ಶಿವಣ್ಣ : ʻಭೈರವನ ಕೊನೆ ಪಾಠʼದ ಫಸ್ಟ್‌ ಲುಕ್‌ ಔಟ್

ಶಿವಣ್ಣ ನಟನೆಯ ಭೈರವನ ಕೊನೆ ಪಾಠ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಗೊಂಡಿದ್ದು, ಇದರಲ್ಲಿ ಶಿವಣ್ಣ ಒಂದು ನೂತನ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬೆಂಗಳೂರು: ಶಿವಣ್ಣ ನಟನೆಯ ಭೈರವನ ಕೊನೆ ಪಾಠ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಗೊಂಡಿದ್ದು, ಇದರಲ್ಲಿ ಶಿವಣ್ಣ ಒಂದು ನೂತನ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Ad
300x250 2

ಸ್ಯಾಂಡಲ್‌ ವುಡ್‌ನಲ್ಲಿ ʼಕವಲುದಾರಿʼ, “ಗೋಧಿ ಬಣ್ಣ ಸಾಧಾರಣ ಮೈಕಟ್ಟು’, “ಸಪ್ತಸಾಗರದಾಚೆ ಎಲ್ಲೋ(ಸೈಡ್‌ ಎ,ಬಿ) ಚಿತ್ರಗಳನ್ನು ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಹೇಮಂತ್‌ ರಾವ್‌ ಮಾಸ್‌ ಹೀರೋ ಶಿವಣ್ಣ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದರಿಂದ ಈ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಇತ್ತೀಚೆಗಷ್ಟೇ ಸಿನಿಮಾದ ಟೈಟಲ್‌ ರಿವೀಲ್‌ ಮಾಡಿದ ಚಿತ್ರತಂಡ ಇದೀಗ ಫಸ್ಟ್‌ ಲುಕ್‌ ರಿಲೀಸ್‌ ಮಾಡಿ ಕುತೂಹಲವನ್ನು ಹೆಚ್ಚಾಗಿಸಿದೆ.ಶಿವಣ್ಣ ಬಿಳಿ ಗಡ್ಡ-ಮೀಸೆಯ ಯೋಧನಾಗಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಗಮನ ಸೆಳೆದಿದೆ.

Ad
Ad
Nk Channel Final 21 09 2023
Ad