ಮುಂಬಯಿ: ಸಹೋದರಿಯ ಮೇಲೆ ಹಿಗ್ಗಾಮುಗ್ಗಾ ಥಳಿಸಿದ ಆರೋಪದ ಕೇಳಿ ಬಂದ ಹಿನ್ನೆಲೆ ಜನಪ್ರಿಯ ಯೂಟ್ಯೂಬರ್ ಮತ್ತು ಬಿಗ್ ಬಾಸ್ ಓಟಿಟಿ-3 ಖ್ಯಾತಿಯ ಅದ್ನಾನ್ ಶೇಖ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಅದ್ನಾನ್ ಶೇಖ್ ಸಹೋದರಿ ಆಯೇಷಾ ಗೋರೆಗಾಂವ್‌ನ ಬಂಗೂರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
“ಕೊನೆಗೆ ನನ್ನ ದೂರನ್ನು ಪೊಲೀಸರು ದಾಖಲಿಸಿದ್ದಾರೆ ಮತ್ತು ನನ್ನನ್ನು ಥಳಿಸಿದ ನನ್ನ ಸಹೋದರನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ” ಎಂದು ಅದ್ನಾನ್ ಸಹೋದರಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ಹೇಳಿದ್ದಾರೆ.
ಕೆಲ ಸಮಯದಿಂದ ಹಿಂದೆ ಅದ್ನಾನ್ ತನ್ನ ಸಹೋದರಿ ಆಯೇಷಾ ಹಾಗೂ ಅವರ ಮಾವನ ಮೇಲೆ ಹಲ್ಲೆ ನಡೆಸಿದ್ದಾರೆ. ಸಹೋದರಿಗೆ ಹಿಗ್ಗಾಮುಗ್ಗಾವಾಗಿ ಥಳಿಸಿದ್ದಾರೆ. ಮೊದಮೊದಲು ಕುಟುಂಬಕ್ಕೆ ಸಂಬಂಧಿಸಿದ ವಿಚಾರವಾಗಿ ಮನೆಯಲ್ಲೇ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಲಾಗಿದೆ ಆದರೆ ಆದಾದ ಬಳಿಕವೂ ಅದ್ನಾನ್ ಅದೇ ರೀತಿಯಾಗಿ ವರ್ತಿಸಿದ್ದು ಸಹೋದರಿ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.