News Karnataka Kannada
Thursday, April 18 2024
Cricket
ಮನರಂಜನೆ

ಒಟಿಟಿಯಲ್ಲಿ ರಿಲೀಸ್ ಆಗಲಿದೆ ಶಾರುಖ್ ಖಾನ್ ನಟನೆಯ ‘ಡಂಕಿ’

ಶಾರುಖ್ ಖಾನ್  ನಟನೆಯ ‘ಡಂಕಿ’ ಸಿನಿಮಾ ಕಳೆದ ವರ್ಷ ಡಿಸೆಂಬರ್ 21ರಂದು ಥಿಯೇಟರ್​ನಲ್ಲಿ ರಿಲೀಸ್ ಆಗಿತ್ತು. ಈ ಚಿತ್ರ ಯಾವಾಗ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದು ಕಾದಿದ್ದ ಫ್ಯಾನ್ಸ್​ಗೆ ಉತ್ತರ ಸಿಕ್ಕಿದೆ. ಈ ಸಿನಿಮಾ ನೆಟ್​ಫ್ಲಿಕ್ಸ್ ಮೂಲಕ ಪ್ರಸಾರ ಆರಂಭಿಸಿದೆ.
Photo Credit : News Kannada

ಮುಂಬೈ:  ಶಾರುಖ್ ಖಾನ್  ನಟನೆಯ ‘ಡಂಕಿ’ ಸಿನಿಮಾ ಕಳೆದ ವರ್ಷ ಡಿಸೆಂಬರ್ 21ರಂದು ಥಿಯೇಟರ್​ನಲ್ಲಿ ರಿಲೀಸ್ ಆಗಿತ್ತು. ಈ ಚಿತ್ರ ಯಾವಾಗ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದು ಕಾದಿದ್ದ ಫ್ಯಾನ್ಸ್​ಗೆ ಉತ್ತರ ಸಿಕ್ಕಿದೆ. ಈ ಸಿನಿಮಾ ನೆಟ್​ಫ್ಲಿಕ್ಸ್ ಮೂಲಕ ಪ್ರಸಾರ ಆರಂಭಿಸಿದೆ.

ಸಿನಿಮಾ ಥಿಯೇಟರ್​​ನಲ್ಲಿ ರಿಲೀಸ್ ಆಗಿ ಒಂದು ತಿಂಗಳ ಒಳಗೆ ಒಟಿಟಿಗೆ ಕಾಲಿಟ್ಟಿರುತ್ತದೆ. ‘ಡಂಕಿ’ ರಿಲೀಸ್ ಆಗಿ ಎರಡು ತಿಂಗಳು ತುಂಬಲು ಒಂದು ವಾರ ಇರುವಾಗ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಫೆಬ್ರವರಿ 14 ಪ್ರೇಮಿಗಳ ದಿನ. ಈ ವಿಶೇಷ ದಿನದಂದು ರಾತ್ರಿ ಸಿನಿಮಾ ಪ್ರಸಾರ ಆರಂಭಿಸಿದೆ.

ನಿರ್ದೇಶಕ ರಾಜ್​ಕುಮಾರ್ ಹಿರಾನಿ ಅವರು ಬಾಲಿವುಡ್​ನ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಅವರು ‘ಡಂಕಿ’ ಚಿತ್ರದ ಮೂಲಕ ಮೊದಲ ಬಾರಿಗೆ ಶಾರುಖ್ ಖಾನ್ ಜೊತೆ ಕೈ ಜೋಡಿಸಿದರು. ಈ ಕಾರಣಕ್ಕೆ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ, ಈ ನಿರೀಕ್ಷೆಯ ಮಟ್ಟವನ್ನು ಸಂಪೂರ್ಣವಾಗಿ ತಲುಪಲು ಸಿನಿಮಾ ಬಳಿ ಸಾಧ್ಯವಾಗಿಲ್ಲ.

‘ಡಂಕಿ’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ವಿಕ್ಕಿ ಕೌಶಲ್, ಬೋಮನ್ ಇರಾನಿ, ತಾಪ್ಸಿ ಪನ್ನು ಮೊದಲಾದವರು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರವನ್ನು ರಾಜ್​ಕುಮಾರ್ ಹಿರಾನಿ ಹಾಗೂ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ನಿರ್ಮಾಣ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು