News Karnataka Kannada
Monday, April 29 2024
ಸಾಂಡಲ್ ವುಡ್

ಸಂಜು ವೆಡ್ಸ್ ಗೀತಾ -2: ಮೋಹಕತಾರೆ ರಮ್ಯಾ ಫ್ಯಾನ್ಸ್​ಗೆ ಗುಡ್ ನ್ಯೂಸ್

sanju weds geethapart 2
Photo Credit : Twitter

ಸಂಜು ವೆಡ್ಸ್ ಗೀತಾ ಕನ್ನಡ ಚಿತ್ರರಂಗದಲ್ಲಿ ದಶಕಗಳ ಹಿಂದೆ ರಿಲೀಸ್ ಆದ ಅತ್ಯುತ್ತಮ ಲವ್ ಸ್ಟೋರಿ ಸಿನಿಮಾ ಆಗಿದೆ. ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಕೆಮಿಸ್ಟ್ರಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಸಿನಿಮಾದ ಒಂದೊಂದು ಹಾಡುಗಳು ಕೂಡ ಸೂಪರ್​ ಹಿಟ್​ ಆಗಿತ್ತು. ಸಂಭಾಷಣೆ ಜನರ ಮನ ಮುಟ್ಟಿತ್ತು. ಶ್ರೀನಗರ ಕಿಟ್ಟಿ ಹುಟ್ಟುಹಬ್ಬದ ದಿನ ಸಂಜು ವೆಡ್ಸ್ ಗೀತಾ 2 ಸಿನಿಮಾದ ಘೋಷಣೆ ಮಾಡಲಾಗಿತ್ತು. ಪೋಸ್ಟರ್ ಸಹ ಬಿಡುಗಡೆ ಮಾಡಿದ್ರು. ಇದೀಗ ನಿರ್ದೇಶಕ ನಾಗಶೇಖರ್, ಸಂಜು ವೆಡ್ಸ್ ಗೀತಾ 2 ಸಿನಿಮಾದ ಹೊಸ ಅಪ್ಡೇಟ್ ನೀಡಿದ್ದಾರೆ.

ಗೀತಾಳ ಹುಡುಕಾಟದಲ್ಲಿದ್ದ ಡೈರೆಕ್ಟರ್ ನಾಗಶೇಖರ್ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ. ಸಂಜು ಇದೀಗ ಗೀತಾಳಿಗೋಸ್ಕರ ಮತ್ತೆ ಹುಟ್ಟಿ ಬರ್ತಿದ್ದಾನೆ. ತೆರೆ ಮೇಲೆ ‘ಸಂಜು ವೆಡ್ಸ್ ಗೀತಾ’ ಪಾರ್ಟ್-2 ಬರಲಿದೆ. ‘ಸಂಜು ವೆಡ್ಸ್ ಗೀತಾ’ 27 ಅವಾರ್ಡ್ ಕೊಟ್ಟ ಸಿನಿಮಾ ಆಗಿದೆ. ಈಗ ನಾವು ಪಾರ್ಟ್-2 ಮಾಡಲು ನಿರ್ಧಾರ ಮಾಡಿದ್ದೇವೆ. ಆಗಸ್ಟ್​ 15ರಂದು ಸಿನಿಮಾಗೆ ಮುಹೂರ್ತ ಮಾಡೊಕೆ ಪ್ಲ್ಯಾನ್ ಮಾಡಿರುವುದಾಗಿ ಹೇಳಿದ್ದಾರೆ. ಚಿತ್ರದಲ್ಲಿ ರಮ್ಯಾ ಇರ್ತಾರೆ ಅನ್ನೋ ಭರವಸೆ ಇದೆ. ಈ ವಿಚಾರ ರಮ್ಯಾ ಅವರ ಆಪ್ತ ಬಳಗಕ್ಕೆ ತಿಳಿಸಿದ್ದೀನಿ. ರಮ್ಯಾ ಫಾರಿನ್‌ನಿಂದ ಬಂದ ಕೂಡಲೇ ತಿಳಿಸುತ್ತೇವೆ ಎಂದರು.

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು