Bengaluru 20°C
Ad

ಈ ಬಾರಿಯ ಬಿಗ್​ಬಾಸ್​ ಸೀಸನ್ 11ಕ್ಕೆ ಎಂಟ್ರಿ ಕೊಟ್ಟ ಧನರಾಜ್ ಆಚಾರ್ಯ

ಕಾಮಿಡಿ ಕಲಾವಿದ ಧನರಾಜ್ ಆಚಾರ್ಯ ಈಗ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವೇದಿಕೆ ಗ್ರ್ಯಾಂಡ್​ ಆಗಿ ಬಂದ ಧನರಾಜ್ ಆಚಾರ್ಯ ಅವರನ್ನು ಕಿಚ್ಚ ಸುದೀಪ್​ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

ಕಾಮಿಡಿ ಕಲಾವಿದ ಧನರಾಜ್ ಆಚಾರ್ಯ ಈಗ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವೇದಿಕೆ ಗ್ರ್ಯಾಂಡ್​ ಆಗಿ ಬಂದ ಧನರಾಜ್ ಆಚಾರ್ಯ ಅವರನ್ನು ಕಿಚ್ಚ ಸುದೀಪ್​ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ತಮ್ಮ ಕುಟುಂಬಸ್ಥರ ಜೊತೆ ಸೇರಿಕೊಂಡು ಕಂಟೆಂಟ್​ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು.

ಧನರಾಜ್ ಆಚಾರ್ಯ ವಿಭಿನ್ನ ಕಾಮಿಡಿ ಮ್ಯಾನರಿಸಂ​ಗೆ ನೆಟ್ಟಿಗರು ಮನಸೋತಿದ್ದರು. ಒಂದು ಸಮಯದಲ್ಲಿ ಹಾಸ್ಯ ನಟ ಧನರಾಜ್ ಆಚಾರ್ಯ ಕಾಮಿಡಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದವು. ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಇಬ್ಬರು ನಟಿಯರು ಮುಂಬರುವ ಸ್ಪರ್ಧಿಗಳು ನರಕಕ್ಕೆ ಹೋಗಬೇಕಾ ಅಥವಾ ಸ್ವರ್ಗಕ್ಕೆ ಹೋಗಬೇಕಾ ಅಂತ ನಿರ್ಧಾರ ಮಾಡಲಿದ್ದಾರೆ.

ಧನರಾಜ್ ಆಚಾರ್ಯ ಅವರು ತಮ್ಮ ವಿಭಿನ್ನ ಕಾಮಿಡಿಯಿಂದ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದರು. ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಸೀಸನ್​ 3ನೇ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ಅವರ ನಿರ್ಧಾರದ ಮೇಲೆ ಧನರಾಜ್ ಆಚಾರ್ಯ ಅವರು ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

Ad
Ad
Nk Channel Final 21 09 2023