ತೆಲುಗಿನ ಸ್ಟಾರ್ ನಟ ಜ್ಯೂ.ಎನ್‌ಟಿಆರ್ ನಟನೆಯ ‘ದೇವರ’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಆ್ಯಕ್ಷನ್ ಅವತಾರದಲ್ಲಿ ತಾರಕ್ ಕಾಣಿಸಿಕೊಂಡಿದ್ದಾರೆ. ಡಬಲ್ ರೋಲ್‌ನಲ್ಲಿ ನಟ ಖಡಕ್ ಆಗಿ ನಟಿಸಿದ್ದಾರೆ.
ಆ್ಯಕ್ಷನ್, ಪ್ರೀತಿ, ದ್ವೇಷ ಎಲ್ಲವನ್ನೂ ಒಳಗೊಂಡಿರುವ ಮಸ್ತ್ ಆಗಿರುವ ‘ದೇವರ’ ಟ್ರೈಲರ್ ರಿಲೀಸ್ ಆಗಿದೆ. ಈ ಹಿಂದೆ ಎಂದೂ ನಟಿಸಿರದ ಪಾತ್ರದಲ್ಲಿ ತಾರಕ್ ಕಾಣಿಸಿಕೊಂಡಿದ್ದಾರೆ. ರಕ್ತದಿಂದ ಸಮುದ್ರವೇ ಕೆಂಪಾದ ಕಥೆ ಹೇಳೋಕೆ ಬರುತ್ತಿದ್ದಾರೆ.
ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಸೈಫ್ ಅಲಿ ಖಾನ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಬಹುಭಾಷೆಗಳಲ್ಲಿ ಮೂಡಿ ಬಂದಿರುವ ‘ದೇವರ’ ಸಿನಿಮಾ ಸದ್ಯದಲ್ಲೇ ರಿಲೀಸ್ ಆಗಲಿದೆ. ವಿಭಿನ್ನವಾಗಿರುವ ಕಥೆಯನ್ನೇ ನಿರ್ದೇಶಕ ಕೊರಟಾಲ ಶಿವ ಹೆಣೆದಿದ್ದಾರೆ.
Ad