Bengaluru 28°C
Ad

ಬಾಕ್ಸ್​ ಆಫೀಸಿನಲ್ಲಿ ಧೂಳೆಬ್ಬಿಸುತ್ತಿರುವ ದೇವರ; 40 ಕೋಟಿ ಮೌಲ್ಯದ ಟಿಕೆಟ್​ ಮಾರಾಟ !

Devara

ತೆಲುಗು ಸೂಪರ್​​ಸ್ಟಾರ್ ಜೂನಿಯರ್​ ಎನ್​ಟಿಆರ್​ ಅಭಿನಯದ ದೇವರ ಸಿನಿಮಾ ತೆರೆಕಂಡಿದೆ. ಅದ್ಭುತ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಉತ್ತಮ ಪ್ರದರ್ಶನ ಕಂಡ ಸಿನಿಮಾ ಭರ್ಜರಿ ಕಲೆಕ್ಷನ್​ ಮಾಡಿತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ.

ಪ್ರಭಾಸ್​ ಮತ್ತು ದೀಪಿಕಾ ಪಡುಕೋಣೆ ನಟನೆಯ ಕಲ್ಕಿ 2998 AD ಸಿನಿಮಾದ ಬಳಿಕ ದೇವರ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾ ಭಾರತದಲ್ಲಿಯೇ ಅತಿ ಹೆಚ್ಚು ಗಳಿಕೆ ಮಾಡಲಿದೆ ಎಂಬ ನಿರೀಕ್ಷೆಯಿದೆ. ಸದ್ಯ ಹರಿದಾಡುತ್ತಿರುವ ಮಾಹಿತಿಯಂತೆ ಜೂನಿಯರ್​ ಎನ್​ಟಿಆರ್​ ಅಭಿನಯದ ಈ ಸಿನಿಮಾ ಮೊದಲ ದಿನ 125 ಕೋಟಿ ಗಳಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಕಲ್ಕಿ ಸಿನಿಮಾ ಮೊದಲ ದಿನ 177.70 ಕೋಟಿ ಗಳಿಕೆ ಮಾಡಿತ್ತು. ಇದೀಗ ಕೊರಟಾಲ ಶಿವ ಅವರ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾವು ವಿಶ್ವಾದಾದ್ಯಂತ ಸುಮಾರು 75 ಕೋಟಿಗೂ ಮುಂಗಡ ಬುಕ್ಕಿಂಗ್​​ ಪಡೆದಿತ್ತು ಎಂದು ಸ್ಯಾಕ್​​ನಿಲ್ಕ್​ ಹೇಳಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 60-70 ಕೋಟಿ ಗಳಿಕೆಯ ನಿರೀಕ್ಷೆಯಿದೆ. ಒಟ್ಟಾರೆ ಭಾರತದಲ್ಲಿ 85-90 ಕೋಟಿ ರೂಪಾಯಿಯಷ್ಟು ಮೊದಲ ದಿನ ಗಳಿಸಬಹುದು ಎಂದು ಹೇಳಲಾಗುತ್ತಿದೆ. ಅಂದಹಾಗೆಯೇ ಈ ಸಿನಿಮಾದ ಪ್ರೀಮಿಯಂ ಮಾರಾಟ ಸೇರಿದಂತೆ 40 ಕೋಟಿ ಮೌಲ್ಯದ ಟಿಕೆಟ್​ ಮಾರಾಟ ಮಾಡಿದೆ ಎಂದ ಫಿಲ್ಮ್​ ಟ್ರೇಡ್​ ಪೋರ್ಟಲ್​​ ಸ್ಯಾಕ್​​​​ನಿಲ್ಕ್​  ತಿಳಿಸಿದೆ.

Ad
Ad
Nk Channel Final 21 09 2023