Bengaluru 21°C
Ad

ಕೊನೆಗೂ ಶ್ರೀಮುರಳಿ ನಟನೆಯ ‘ಬಘೀರ’ ಚಿತ್ರದ ಬಿಡುಗಡೆಗೆ ದಿನಾಂಕ ಫಿಕ್ಸ್‌

ಶ್ರೀಮುರಳಿ ನಾಯಕನಾಗಿ ನಟಿಸಿ, ಹೊಂಬಾಳೆ ಫಿಲಮ್ಸ್​ ಬಂಡವಾಳ ಹೂಡಿದ್ದ ‘ಬಘೀರ’ ಸಿನಿಮಾ ವರ್ಷಗಳಿಂದಲೂ ಚಿತ್ರೀಕರಣ ಚಾಲ್ತಿಯಲ್ಲಿತ್ತು. ಶ್ರೀಮುರಳಿಗೆ ಆದ ಗಾಯಗಳು ಇನ್ನಿತರೆ ಕಾರಣಗಳಿಂದ ಸಿನಿಮಾದ ಬಿಡುಗಡೆ ತಡವಾಗುತ್ತಲೇ ಬಂದಿತ್ತು. ಇದೀಗ ಕೊನೆಗೂ ಹೊಂಬಾಳೆ ಫಿಲಮ್ಸ್​ ‘ಬಘೀರ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಸಿನಿಮಾ ಕನ್ನಡ ಮಾತ್ರವಲ್ಲದೆ ಕೆಲ ಪರಭಾಷೆಗಳಲ್ಲಿಯೂ ಬಿಡುಗಡೆ ಆಗುತ್ತಿರುವುದು ವಿಶೇಷ.

ಇಂದು (ಸೆಪ್ಟೆಂಬರ್ 11) ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ‘ಬಘೀರ’ ಸಿನಿಮಾದ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಪ್ರಕಟ ಮಾಡಿದೆ. ಸಿನಿಮಾವು ಅಕ್ಟೋಬರ್ 31ರಂದು ಬಿಡುಗಡೆ ಆಗಲಿದೆ. ಕನ್ನಡ ಮಾತ್ರವಲ್ಲದೆ ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿಯೂ ಸಹ ಈ ಸಿನಿಮಾ ತೆರೆಗೆ ಬರಲಿರುವುದು ವಿಶೇಷ.

‘ಬಘೀರ’ ಸಿನಿಮಾದಲ್ಲಿ ಶ್ರೀಮುರಳಿಗೆ ಎದುರಾಗಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಪ್ರಕಾಶ್ ರೈ, ಅಚ್ಯುತ್ ಕುಮಾರ್, ರಂಗಾಯಣ ರಘು, ಗರುಡ ರಾಮ್ ಇನ್ನೂ ಮುಂತಾದವರಿದ್ದಾರೆ. ಸಿನಿಮಾದ ಕತೆಯನ್ನು ಪ್ರಶಾಂತ್ ನೀಲ್ ಬರೆದಿದ್ದಾರೆ. ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ಡಾ ಸೂರಿ. ಸಿನಿಮಾದ ಬಿಡುಗಡೆ ದಿನಾಂಕ ಪೋಸ್ಟರ್​ನಲ್ಲಿ ಪ್ರಶಾಂತ್ ನೀಲ್ ಹೆಸರು ಹೈಲೆಟ್ ಆಗಿದೆ.

Ad
Ad
Nk Channel Final 21 09 2023