ಮಂಗಳೂರು: ಕನ್ನಡ ಸಿನಿಮಾ ಲೋಕದ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ನಟನೆಯ ಭಾರಿ ನಿರೀಕ್ಷೆಯ UI ಸಿನಿಮಾ ರಿಲೀಸ್ ಗೆ ದಿನಗಣನೆ ಆರಂಭವಾಗಿದ್ದು ಡಿಸೆಂಬರ್ 20 ಕ್ಕೆ ಡೇಟ್ ಫಿಕ್ಸ್ ಆಗಿದೆ. ಈ ಹಿನ್ನೆಲೆ ಉಪ್ಪಿ ಅವರು ಮಂಗಳವಾರ U I ಸಿನಿಮಾ ತಂಡದೊಂದಿಗೆ ಪತ್ರಿಕಾಗೋಷ್ಠಿ ನಡೆಸಿದರು.
ಕನ್ನಡ ಸಿನಿಮಾ ಲೋಕದ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ನಟನೆಯ ಭಾರಿ ನಿರೀಕ್ಷೆಯ UI ಸಿನಿಮಾ ರಿಲೀಸ್ ಗೆ ದಿನಗಣನೆ ಆರಂಭವಾಗಿದ್ದು ಡಿಸೆಂಬರ್ 20 ಕ್ಕೆ ಡೇಟ್ ಫಿಕ್ಸ್ ಆಗಿದೆ. ಈ ಹಿನ್ನೆಲೆ ಉಪ್ಪಿ ಅವರು ಮಂಗಳವಾರ U I ಸಿನಿಮಾ ತಂಡದೊಂದಿಗೆ ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಚಿತ್ರದ ಬಗ್ಗೆ ಹಂಚಿಕೊಂಡ್ರು ,
ಉಪೇಂದ್ರ ಜೊತೆ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಲಹರಿ ವೇಲು ಹಾಗೂ ನವೀನ್ ಮನೋಹರನ್ ಉಪಸ್ಥಿತರಿದ್ದರು . ಒಟ್ಟಾರೆ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ ಎನ್ನಬಹುದು.