ಚೆನ್ನೈ: ಕಾಲಿವುಡ್‌ನಲ್ಲಿ ದಳಪತಿ ವಿಜಯ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ ʼಗೋಟ್ʼ ಸಿನಿಮಾ ಕ್ರೇಜ್ ಹುಟ್ಟಿಸಿತ್ತು. ಸೆ.5 ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗಿದ್ದ ʼಗೋಟ್ʼಗೆ ಎಂದಿನಂತೆ ವಿಜಯ್ ಅಭಿಮಾನಿಗಳ ಫಿದಾ ಆಗಿದ್ದರು. ಆದರೆ ಉಳಿದ ಪ್ರೇಕ್ಷಕರಿಂದ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮಿಶ್ರ ಪ್ರತಿಕ್ರಿಯೆ ಕೇಳಿ ಬಂದರೂ ವಿಶ್ವದಾದ್ಯಂತದ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.
ಭರ್ಜರಿ ಪ್ರಚಾರದೊಂದಿಗೆ ಬಂದ ʼಗೋಟ್ʼ ಆರಂಭಿಕ ಎರಡು ವಾರದಲ್ಲಿ ಅಷ್ಟೇ ಭರ್ಜರಿಯಾಗಿ ಬ್ಯುಸಿನೆಸ್ ಮಾಡಿತು. ಆ ಬಳಿಕ ಹೊಸ ಸಿನಿಮಾಗಳ ಅಲೆಯಲ್ಲಿ ಬದಿಗೆ ಸರಿಯಿತು. ಇದೀಗ ಥಿಯೇಟರ್ ನಂತರ ಓಟಿಟಿಗೆ ʼಗೂಟ್ʼ ಎಂಟ್ರಿ ಆಗಲು ಡೇಟ್ ಪಿಕ್ಸ್ ಆಗಿದೆ.
Ad