Bengaluru 25°C
Ad

“ದೇವರ ಅಬ್ಬರ”: ಥಿಯೇಟರ್ ಮುಂದೆ ಜೂ.ಎನ್​ಟಿಆರ್ ಕಟೌಟ್‌ಗೆ ಬೆಂಕಿ

Jrntr

ಹೈದರಾಬಾದ್‌: ಜೂನಿಯರ್ ಎನ್​ಟಿಆರ್ ಅಭಿನಯದ ಹಾಗೂ ಕೊರಟಾಲ ಶಿವ ನಿರ್ದೇಶನದ ದೇವರ ಸಿನಿಮಾ ರಿಲೀಸ್ ಆಗಿದ್ದು ಭರ್ಜರಿ ಪ್ರದರ್ಶನ ಕಾಣ್ತಿದೆ. ಆಂಧ್ರ, ತೆಲಂಗಾಣ, ಬೆಂಗಳೂರು ಸೇರಿದಂತೆ ವಿಶ್ವಾದ್ಯಂತ ಮಧ್ಯರಾತ್ರಿಯಿಂದಲೇ ಮೊದಲ ಶೋ ಆರಂಭವಾಗಿದೆ. ದೇವರ ಸಿನಿಮಾಗೆ ಮೊದಲ ದಿನವೇ ಅಬ್ಬರದ ಓಪನಿಂಗ್ ಸಿಕ್ಕಿದ್ದು, JrNTR ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ.

ದೇವರ ಹಿಟ್ ಜೋಡಿ JrNTR ಹಾಗೂ ಕೊರಟಾಲ ಶಿವ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರೋ ಬಿಗ್ ಬಜೆಟ್‌ ಸಿನಿಮಾ. ಜನತಾ ಗ್ಯಾರೇಜ್ ಬಳಿಕ ಮತ್ತೊಂದು ಹಿಟ್ ಸಿನಿಮಾಗೆ ಈ ಜೋಡಿ ಮತ್ತೆ ಒಂದಾಗಿದೆ.

ಹೈದರಾಬಾದ್‌ನಲ್ಲಿ ದೇವರ ಅಬ್ಬರವನ್ನು ಕಣ್ತುಂಬಿಕೊಂಡ JrNTR ಫ್ಯಾನ್ಸ್ ಭರ್ಜರಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಹೈದರಾಬಾದ್‌ನ ಸುದರ್ಶನ 35 MM ಥಿಯೇಟರ್‌ನಲ್ಲಿ ಅಭಿಮಾನಿಗಳು ಸೆಲೆಬ್ರೇಟ್‌ ಮಾಡುವಾಗ ಅವಘಡ ಸಂಭವಿಸಿದೆ. ಥಿಯೇಟರ್ ಮುಂದೆ ಜೂನಿಯರ್ ಎನ್‌ಟಿಆರ್ ಕಟೌಟ್‌ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಬೂದಿಯಾಗಿದೆ. ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮ ಪಡುವಾಗ ಜೂನಿಯರ್ ಎನ್‌ಟಿಆರ್ ಕಟೌಟ್‌ಗೆ ಬೆಂಕಿ ಬಿದ್ದಿದೆ. ಕಟೌಟ್ ಹೊತ್ತಿ ಉರಿಯುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೈದರಾಬಾದ್‌ನ ಹಿಮ್ಮಾಯತ್‌ ನಗರದಲ್ಲಿರುವ ಸುದರ್ಶನ 35 ಎಂಎಂ ಥಿಯೇಟರ್‌ನಲ್ಲಿ ಈ ಘಟನೆ ನಡೆದಿದೆ.

ಜೂನಿಯರ್ ಎನ್‌ಟಿಆರ್ ನಟನೆಯ ದೇವರ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿದ್ದು, ಭರ್ಜರಿ ಓಪನಿಂಗ್ ಪಡೆದಿದೆ. ರಾಜ್ಯದಲ್ಲೂ ನೂರಾರು ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗಿದ್ದು, ಮಧ್ಯರಾತ್ರಿಯಿಂದಲೇ ಶೋಗಳು ಆರಂಭವಾಗಿದೆ.

Ad
Ad
Nk Channel Final 21 09 2023