Bengaluru 28°C
Ad

ಮುಸ್ಲಿಂ ಮಹಿಳೆಯರ ಕುರಿತಾದ ‘ಹಮಾರೆ ಬಾರಾ’ ಸಿನಿಮಾ ಬಿಡುಗಡೆಗೆ ನ್ಯಾಯಲಯ ತಡೆ

ಕಮಲ್ ಚಂದ್ರಾ ನಿರ್ದೇಶನ ಮಾಡಿ ಅನ್ನು ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಹಮಾರೆ ಬಾರಾ’ ನಿರ್ಮಾಣವಾಗಿದ್ದು, ಸಿನಿಮಾ ಇದೇ ಜೂನ್ 7ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾದ ಬಿಡುಗಡೆಗೆ ನ್ಯಾಯಾಲಯ ತಡೆ ಒಡ್ಡಿದೆ.

ಕಮಲ್ ಚಂದ್ರಾ ನಿರ್ದೇಶನ ಮಾಡಿ ಅನ್ನು ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಹಮಾರೆ ಬಾರಾ’ ನಿರ್ಮಾಣವಾಗಿದ್ದು, ಸಿನಿಮಾ ಇದೇ ಜೂನ್ 7ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾದ ಬಿಡುಗಡೆಗೆ ನ್ಯಾಯಾಲಯ ತಡೆ ಒಡ್ಡಿದೆ.

‘ಹಮಾರೆ ಬಾರಾ’ ಮುಸ್ಲಿಂ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಕತೆಯನ್ನು ಒಳಗೊಂಡಿದೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಗಮನ ಸೆಳೆದಿದೆ. ಮೌಲಾ ಒಬ್ಬ, ಮಹಿಳೆಯರು ಕೇವಲ ಪುರುಷರ ಭೋಗ ವಸ್ತುಗಳು, ಅವರಿಗೆ ಸ್ವಾತಂತ್ರ್ಯ ನೀಡುವಂತಿಲ್ಲ ಎಂಬಿತ್ಯಾದಿ ಭಾಷಣ ಮಾಡುತ್ತಿರುವ ದಶ್ಯದಿಂದ ಪ್ರಾರಂಭವಾಗುವ ಟೀಸರ್, ಮುಸ್ಲಿಂ ಮಹಿಳೆಯರ ಮೇಲೆ ಅವರ ಪತಿ ನಡೆಸುತ್ತಿರುವ ದೌರ್ಜನ್ಯದ ದೃಶ್ಯಗಳನ್ನು ಕಟ್ಟಿಕೊಡಲಾಗಿದೆ.

ಈ ಸಿನಿಮಾದ ವಿರುದ್ಧ ಅಜರ್ ತಂಬೋಲ್ ಎಂಬುವರು, ಸಿನಿಮಾದ ಟೀಸರ್ ಅನ್ನು ಆಧರಿಸಿ ಸಿನಿಮಾದ ವಿರುದ್ಧ ಬಾಂಬೆ ಹೈಕೋರ್ಟ್​ನಲ್ಲಿ ಮೊಕದ್ದಮೆ ಹೂಡಿದ್ದರು. ಅರ್ಜಿ ವಿಚಾರಣೆ ಮಾಡಿದ ಬಾಂಬೆ ಹೈಕೋರ್ಟ್, ಜೂನ್ 14 ರವರೆಗೆ ಸಿನಿಮಾದ ಬಿಡುಗಡೆಗೆ ತಡೆ ನೀಡಿದ್ದು, ಅಂದು ಮರು ವಿಚಾರಣೆ ನಡೆಯಲಿದೆ. ಸಿನಿಮಾದ ಬಗ್ಗೆ ಸಿಬಿಎಫ್​ಸಿ ಬಾಂಬೆ ಹೈಕೋರ್ಟ್​ಗೆ ಮಾಹಿತಿ ನೀಡಿದ್ದು, ಸಿನಿಮಾದ ಸರ್ಟಿಫಿಕೇಟ್ ನೀಡುವ ಹಕ್ಕಿದ್ದು, ಅದನ್ನು ತಾವು ನಿಭಾಯಿಸಿದ್ದು, ಟ್ರೈಲರ್ ಬಗ್ಗೆ ತಾವೇನೂ ಮಾಡಲಾಗುವುದಿಲ್ಲ ಎಂದಿದೆ.

Ad
Ad
Nk Channel Final 21 09 2023
Ad