Ad

ತರುಣ್-ಸೋನಲ್ ಮೊಂತೆರೊ ಆರತಕ್ಷತೆಗೆ ಚಂದನವನದ ತಾರೆಯರ ಅಭಿನಂದನೆ

ತರುಣ್​ ಅವರಿಗೆ ಭರ್ಜರಿ ಯಶಸ್ಸು ತಂದುಕೊಟ್ಟ ಸಿನಿಮಾ ‘ಕಾಟೇರ’. ಈ ಸೂಪರ್​ ಹಿಟ್​ ಸಿನಿಮಾವನ್ನು ನಿರ್ಮಾಣ ಮಾಡಿದ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ಅವರು ರಿಸೆಪ್ಷನ್​ಲ್ಲಿ ಭಾಗಿ ಆಗಿದ್ದಾರೆ. ಇನ್ನೂ ಹಲವು ಗಣ್ಯರು ಆಗಮಿಸುತ್ತಿದ್ದಾರೆ.

‘ಕಾಟೇರ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ಆರಾಧನಾ ಅವರು ರಿಸೆಪ್ಷನ್​ನಲ್ಲಿ ಭಾಗಿ ಆಗಿದ್ದಾರೆ. ಹಿರಿಯ ನಟಿ ಮಾಲಾಶ್ರೀ ಕೂಡ ಬಂದು ಆಶೀರ್ವಾದ ಮಾಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್​ ಹಾಜರಿಲ್ಲ ಎಂಬ ಕೊರಗು ಎಲ್ಲರಿಗೂ ಇದೆ.

ಉಳಿದಂತೆ ಹಿರಿಯ ನಟರು ಹಾಗೂ ನಿರ್ದೇಶಕರು ಹೀಗೆ ಚಂದನವನದ ಹಿಂಡೇ ಹರಿದು ಬಂದಿದ್ದು ನವ ಜೋಡಿಯಾದ ತರುಣ್-ಸೋನಲ್ ಜೋಡಿಗೆ ಅಭಿನಂದನೆ ತಿಳಿಸಿದ್ದಾರೆ.
Ad
Ad
Nk Channel Final 21 09 2023