News Karnataka Kannada
Wednesday, May 01 2024
ಮನರಂಜನೆ

ಕಾಮಿಡಿ ಲೆಜೆಂಡ್ ಚಾರ್ಲಿ ಚಾಪ್ಲಿನ್ ಪುತ್ರಿ ಜೋಸೆಫಿನ್ ನಿಧನ

Comedy legend Charlie Chaplin's daughter Josephine passes away
Photo Credit : Twitter

ಪ್ಯಾರಿಸ್‌: ಕಾಮಿಡಿ ಜಗತ್ತಿನ ದಂತಕಥೆ ನಟ ಚಾರ್ಲಿ ಚಾಪ್ಲಿನ್ ಪುತ್ರಿ ಜೋಸೆಫಿನ್ ಚಾಪ್ಲಿನ್ ಅವರು ಜುಲೈ 13 ರಂದು ಪ್ಯಾರಿಸ್‌ನಲ್ಲಿ ನಿಧನರಾದರು. ಚಾರ್ಲಿ ಚಾಪ್ಲಿನ್ ಅವರ 11 ಮಕ್ಕಳಲ್ಲಿ ಆರನೆಯವರಾಗಿದ್ದರು. ಜೋಸೆಫಿನ್ ಚಾಪ್ಲಿನ್ ಅವರಿಗೆ 74 ವರ್ಷ ವಯಸ್ಸಾಗಿತ್ತು.

1949ರ ಮಾರ್ಚ್ 28ರಂದು ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಜನಿಸಿದರು. ಲೈಮ್‌ಲೈಟ್‌ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ತನ್ನ ತಂದೆಯ ಜತೆಯೇ ಚಿಕ್ಕ ವಯಸ್ಸಿನಲ್ಲೇ ಬಣ್ಣ ಹಚ್ಚಿದ್ದರು. 1952ರಲ್ಲೇ ಸಿನಿಮಾ ರಂಗ ಪ್ರವೇಶ ಮಾಡಿದ್ದ ಜೋಸೆಫಿನ್, ತಂದೆ ಚಾರ್ಲಿ ಚಾಪ್ಲಿನ್ ಜತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನ್ಯೂಟಿಸ್ ರೂಜ್ಸ್, ದಿ ಪೀಕ್ಸ್ ಆಫ್ ಝೆಲೆಂಗೋರಾ, ಜ್ಯಾಕ್ ದಿ ರಿಪ್ಪರ್, ದಿ ಬೇ ಬಾಯ್ ಮತ್ತು ಡೌನ್‌ಟೌನ್, ದಿ ಕ್ಯಾಂಟರ್ಬರಿ, ಎಸ್ಕೇಪ್ ಟು ದಿ ಸನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಜೋಸೆಫಿನ್ ನಿಧನಕ್ಕೆ ಹಲವರು ಕಂಬನಿ ಕೂಡ ಮಿಡಿದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು