Ad

‘ಸಿ’ ಸಿನಿಮಾ ಟ್ರೈಲರ್ ಬಿಡುಗಡೆ : ಇದು ಮೆಡಿಕಲ್ ಮಾಫಿಯಾ ಆಧಾರಿತ ಕತೆ

ತನ್ನ ಹೆಸರಿನಿಂದ, ಹಾಡುಗಳಿಂದ ಕುತೂಹಲ ಕೆರಳಿಸಿರುವ ‘ಸಿ’ ಸಿನಿಮಾದ ಟ್ರೈಲರ್ ಆಗಸ್ಟ್ 12 ರಂದು ಬಿಡುಗಡೆ ಆಗಿದೆ. ನಟ ರಾಜವರ್ಧನ್ ‘ಸಿ’ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಹಾರೈಸಿದ್ದಾರೆ. ಈ ಸಿನಿಮಾ, ಅಪ್ಪ-ಮಗಳ ಭಾವುಕ ಸಂಬಂಧದ ಜೊತೆಗೆ ಮೆಡಿಕಲ್ ಮಾಫಿಯಾದ ಕತೆ, ಬಡವರಿಗೆ ಆರೋಗ್ಯ ಎಂಬುದು ಹೇಗೆ ಕೈಗೆಟುದ ದ್ರಾಕ್ಷಿಯಾಗಿದೆ ಎಂಬುದನ್ನು ಸಹ ಹೇಳುವ ಪ್ರಯತ್ನ ಮಾಡುತ್ತಿದೆ ಎಂಬುದು ಟ್ರೈಲರ್​ನಿಂದ ತಿಳಿದು ಬರುತ್ತಿದೆ.

‘ಸಿ’ ಸಿನಿಮಾವನ್ನು ಕಿರಣ್ ಸುಬ್ರಮಣಿ ನಿರ್ದೇಶನ ಮಾಡಿದ್ದಾರೆ. ಆಕ್ಷನ್ ಕಟ್ ಹೇಳಿರುವ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಕಣ್ಣು ಕಾಣದ ಮಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲು ಒದ್ದಾಡುವ ತಂದೆಯ ಪಾತ್ರ ಅವರದ್ದು. ಮಗಳ ಶಸ್ತ್ರ ಚಿಕಿತ್ಸೆಗಾಗಿ ಏನು ಬೇಕಾದರೂ ಮಾಡುವ ಹಠಕ್ಕೆ ಬೀಳುವ ಅಪ್ಪ, ಹೇಗೆ ಸಮಾಜವನ್ನು ಮುಕ್ಕಿ ತಿನ್ನುತ್ತಿರುವ ಮೆಡಿಕಲ್ ಮಾಫಿಯಾದ ಬುಡ ಅಲುಗಾಡಿಸುತ್ತಾನೆ ಎಂಬ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ಟ್ರೈಲರ್ ಬಿಡುಗಡೆ ಮಾಡಿದ ನಟ ರಾಜವರ್ಧನ್, ‘ಸಿನಿಮಾದ ಟ್ರೈಲರ್ ಭಾವುಕವಾಗಿದೆ. ಸಿನಿಮಾದಲ್ಲಿ ಒಂದೊಳ್ಳೆ ಸಂದೇಶ ಇದೆ ಎಂಬುದು ತಿಳಿದು ಬರುತ್ತಿದೆ ಎಂದಿದ್ದಾರೆ.

Ad
Ad
Nk Channel Final 21 09 2023