ಪಠಾಣ್ ಚಿತ್ರಕ್ಕೆ ಶಾರೂಕ್ ಖಾನ್ ತಮ್ಮ ಶಕ್ತಿ ಮೀರಿ ದೇಹದಂಡನೆ ಮಾಡಿದ್ದಾರೆ- ಸಿದ್ಧಾರ್ಥ್ ಆನಂದ್

ಶಾರೂಕ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ತಾರಾಗಣದ ಪಠಾಣ್ ಚಿತ್ರದ ಟೀಸರ್ ಇಂಟರ್‌ನೆಟ್‌ನಲ್ಲಿ ಸಂಚಲನ ಉಂಟು ಮಾಡಿದೆ ಮತ್ತು ಪ್ರೇಕ್ಷಕರು ಕಿಂಗ್ ಎಸ್‌ಆರ್‌ಕೆ ನಾಲ್ಕು ಸುದೀರ್ಘ ವರ್ಷಗಳ ನಂತರ ಬೆಳ್ಳಿತೆರೆಗೆ ಮರಳಿದ್ದಾರೆ! ಜನರು ಸಿದ್ಧಾರ್ಥ್ ಆನಂದ್ ನಿರ್ದೇಶನದ ಯಶ್ ರಾಜ್ ಫಿಲಂಸ್ ನಿರ್ಮಾಣ ಈ ಆ್ಯಕ್ಷನ್ ಅದ್ಭುತದಲ್ಲಿ ಎಸ್‌ಆರ್‌ಕೆ ಅವರ ಹೊಚ್ಚಹೊಸ ಅವತಾರದಲ್ಲಿ ನೋಡಿ ಮಂತ್ರಮುಗ್ಧರಾಗಿದ್ದಾರೆ.

ಈ ಚಲನಚಿತ್ರದಲ್ಲಿನ ಅಸಾಧಾರಣ ಸವಾಲಿನ ಆ್ಯಕ್ಷನ್ ದೃಶ್ಯಗಳಿಗೆ ಅವರ ದೇಹವನ್ನು ಸಜ್ಜುಗೊಳಿಸಲು ಈ ಮೆಗಾಸ್ಟಾರ್ ಅಪಾರ ಬದ್ಧತೆ ತೋರಿದರು ಎಂದು ನಿರ್ದೇಶಕರು ಹೇಳಿದ್ದಾರೆ.

ಸಿದ್ಧಾರ್ಥ್, “ಶಾರೂಕ್ ಖಾನ್ ಪಠಾಣ್‌ಗಾಗಿ ತಮ್ಮ ದೇಹವನ್ನು ಅಪಾರವಾಗಿ ದಂಡಿಸಿದರು. ಆದ್ದರಿಂದ ಪಠಾಣ್ ಟೀಸರ್‌ಗೆ ಅವರಿಗೆ ದೊರೆತ ಅಭೂತಪೂರ್ವ ಪ್ರೀತಿಯು ಅದು ಅವರಿಗೆ ಸೂಕ್ತ ಹಾಗೂ ಹೆಚ್ಚಿನ ಪ್ರೀತಿ ತೋರುವ ಅಗತ್ಯವಿದೆ. ನಾನು ಪಠಾಣ್‌ಗೆ ಅವರನ್ನು ಮೊದಲು ಭೇಟಿ ಮಾಡಿದಾಗ ನಾವು ಅದು ಅವರಿಗೆ ದೈಹಿಕವಾಗಿ ಎಷ್ಟು ಸವಾಲಿನದಾಗಿರುತ್ತದೆ ಎಂದು ಚರ್ಚೆ ನಡೆಸಿದೆವು ಮತ್ತು ಅವರು ಅದಕ್ಕೆ ಸಜ್ಜಾದರು ಹಾಗು ಅದು ಬೆಳ್ಳಿತೆರೆಯ ಮೇಲೆ ಕಾಣಿಸುತ್ತದೆ” ಎಂದರು.

ಅವರು ಮುಂದುವರಿದು, “ಅವರು ರೋಮಾಂಚಕವಾಗಿರಲು ಬಯಸಿದರು ಮತ್ತು ಪ್ರೇಕ್ಷಕರೂ ಅದರ ಅನುಭವವನ್ನು ಬೆಳ್ಳಿತೆರೆಯ ಮೇಲೆ ಪಡೆಯಬೇಕು ಎಂದು ಬಯಸಿದರು. ಅವರು ತಮ್ಮ ದೇಹವನ್ನು ಹುರಿಗೊಳಿಸಿಕೊಂಡ ಪರಿ, ಅತ್ಯಂತ ಅಪಾಯಕಾರಿ ಸ್ಟಂಟ್‌ಗಳಲ್ಲಿ ಅವರು ಪಡೆದ ಅಪಾರ ತರಬೇತಿ, ಅಪಾಯಕಾರಿ ಪ್ರದೇಶಗಳು ಮತ್ತು ವಾತಾವರಣದ ಸಂದರ್ಭಗಳು ಅವರ ದೇಹ ಹಾಗೂ ಬದ್ಧತೆಯ ಮೂಲಕ ಅಸಾಧಾರಣ ಪ್ರಶಂಸೆಯ ಅತ್ಯಂತ ದೊಡ್ಡ ಆ್ಯಕ್ಷನ್ ಚಿತ್ರವನ್ನು ಭಾರತಕ್ಕೆ ಕೊಡಲು ಸಾಧ್ಯವಾಗಿದೆ” ಎಂದರು.

ನಿರ್ದೇಶಕರು ಮುಂದುವರಿದು, “ನಾವು ವಿನ್ಯಾಸಗೊಳಿಸಿದ ಆ್ಯಕ್ಷನ್ ದೃಶ್ಯಗಳಲ್ಲಿ ಅವರು ಎಲ್ಲ ನೋವನ್ನೂ ಹಲ್ಲು ಕಚ್ಚಿ ಸಹಿಸಿದ್ದು ನಿಜಕ್ಕೂ ನಂಬಲಸಾಧ್ಯ. ಶಾರೂಕ್ ಖಾನ್ ಅವರಂತೆ ಮತ್ತೊಬ್ಬರಿಲ್ಲ ಮತ್ತು ನೀವು ಅವರು ಚಲನಚಿತ್ರದಲ್ಲಿ ನಟಿಸಿರುವ ತೀವ್ರತೆಯನ್ನು ಕಾಣಲು ನೀವು ಕಾಯಬೇಕು” ಎಂದರು.

ಪಠಾಣ್ ಜನವರಿ 25, 2023ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

Gayathri SG

Recent Posts

ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ

ಯುವಕನೊಬ್ಬನಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಮಣ್ಣೂರ್ ಗ್ರಾಮದ ಹೊರವಲಯದಲ್ಲಿ ನಡೆದಿದೆ.

12 mins ago

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೀನಾಳ ಕೊಲೆ ಖಂಡಿಸಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ

ಇತ್ತೀಚೆಗೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಸೂರ್ಲಬ್ಬಿಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಕು. ಮೀನಾಳ ಕೊಲೆಯನ್ನು ಖಂಡಿಸಿ ಧಾರವಾಡ ಜಿಲ್ಲಾ ಅಹಿಂದ…

27 mins ago

ಜೀವಂತವಾಗಿರುವ ಮಹಿಳೆ ಸತ್ತಿರೋದಾಗಿ ಘೋಷಿಸಿರುವ ಆಹಾರ ಇಲಾಖೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಅಂಜಿನಮ್ಮ ಎನ್ನುವ ಮಹಿಳೆಯೋರ್ವರು, ಆಹಾರ ಇಲಾಖೆಯ ಯಡವಟ್ಟಿನಿಂದ ಅವರು ಸೌಕರ್ಯಗಳಿಂದ ವಂಚಿಯರಾಗಿದ್ದಾರೆ.

27 mins ago

ಡಿಮ್ಹಾನ್ಸ್ ಸಂಸ್ಥೆಯಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ

ಶ್ರೀ ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದಲ್ಲಿ ಎಲ್ಲರಿಗೂ ಸಮಾನತೆ ಇರಬೇಕೆಂಬ ಒಳ್ಳೆಯ ಆಲೋಚನೆಯನ್ನು ಇಟ್ಟುಕೊಂಡು ಜಾತಿ ಪದ್ದತಿ ನಿರ್ಮೂಲನೆ ಮಾಡಲು,…

50 mins ago

ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಯುವಕನೊರ್ವನ ಮೇಲೆ ಹಲ್ಲೆ

ಕ್ಷುಲ್ಲಕ ವಿಚಾರಕ್ಕೆ ಯುವಕನೊರ್ವನ ಮೇಲೆ ಗುಂಪೊಂದು ಜಾತಿ ನಿಂದನೆ ಮಾಡಿ, ಹಲ್ಲೇ ಮಾಡಿರುವ ಘಟನೆ ಗೋಪ್ಪನಕೊಪ್ಪದ ಗೊಲ್ಲರ ಓಣಿಯಲ್ಲಿ ನಡೆದಿದೆ.

1 hour ago

ಉಡುಪಿ ಆರ್ ಟಿಒ ಕಚೇರಿಗೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ

ಆರ್ ಟಿಒ ಕಚೇರಿಗೆ ಸಂಬಂಧಿಸಿದಂತೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಇಂದು ಉಡುಪಿ…

2 hours ago