ಪಠಾಣ್‌ಗೆ ಜಾನ್ ಅವರು ನಮ್ಮ ಪ್ರಥಮ ಮತ್ತು ಏಕೈಕ ಆಯ್ಕೆಯಾಗಿತ್ತು- ಸಿದ್ಧಾರ್ಥ್ ಆನಂದ್

ಜಾನ್ ಅಬ್ರಹಾಂ ಪಠಾಣ್ ಟೀಸರ್‌ನಲ್ಲಿ ಪ್ರತಿಯೊಬ್ಬರನ್ನೂ ಮಂತ್ರಮುಗ್ಧರನ್ನಾಗಿಸಿದ್ದು ಅದು ಬಿಡುಗಡೆಯಾದಾಗ ಅವರು ಶಾರೂಕ್ ಖಾನ್ ಅವರ ಕಡುವೈರಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಅನಾವರಣಗೊಳಿಸಿದೆ! ಜಾನ್ ಅತ್ಯಂತ ಕೂಲ್ ಆಗಿರುವ ತನ್ನ ಶತ್ರುವನ್ನು ಯಾವುದೇ ಕರುಣೆಯಿಲ್ಲದೆ ನಾಶ ಮಾಡುವ ನಿರ್ದಯ ಪಾತ್ರದಲ್ಲಿದ್ದಾರೆ. ಸಿದ್ಧಾರ್ಥ್ ಅವರು ಜಾನ್ ಮಾತ್ರ ಆ ಪಾತ್ರ ನಿರ್ವಹಿಸಲು ಸಾಧ್ಯವಿತ್ತು ಎನ್ನುತ್ತಾರೆ ಮತ್ತು ಅವರು ಪಠಾಣ್‌ಗೆ ಒಪ್ಪಿಕೊಂಡಾಗ ಥ್ರಿಲ್ ಆಯಿತು ಎನ್ನುತ್ತಾರೆ.

ಸಿದ್ಧಾರ್ಥ್ ಅವರು, “ಪಠಾಣ್ ಜೀವನಕ್ಕಿಂತ ದೊಡ್ಡ ಪಾತ್ರಕ್ಕೆ ಜೀವನಕ್ಕಿಂತ ದೊಡ್ಡ ಬಹುದೊಡ್ಡ ಖಳನಟ ಅಗತ್ಯವಿತ್ತು. ಅತ್ಯಂತ ನಿರ್ದಯಿ ಮತ್ತು ನಯವಾದ ಹಾಗೂ ಸ್ಕ್ರೀನ್ ಮೇಲೆ ಮಿಂಚಿನ ಸಂಚಾರ ಮಾಡಬಲ್ಲವರನ್ನು ಬಯಸಿದ್ದೆವು! ಆದ್ದರಿಂದ ಪಠಾಣ್ ಖಳನನ್ನು ಜಾನ್ ಅಬ್ರಹಾಂ ಅವರನ್ನು ದೃಷ್ಟಿಯಲ್ಲಿರಿಸಿಕೊಂಡು ರಚಿಸಲಾಯಿತು!” ಎನ್ನುತ್ತಾರೆ.

ಅವರು, “ಅವರು ನಮ್ಮ ಮೊದಲ ಮತ್ತು ಏಕೈಕ ಆಯ್ಕೆಯಾಗಿತ್ತು, ಮತ್ತು ಎಂದೆಂದಿಗೂ ನೆನಪಿನಲ್ಲಿ ಉಳಿಯುವ ವಿಲನ್ ಅನ್ನು ಖಂಡಿತ ಬಯಸಿದ್ದೆವು. ಜಾನ್ ಅವರ ಮೇಲೆ ಜನರು ತೋರಿಸಿರುವ ಪ್ರತಿಕ್ರಿಯೆಗೆ ನಾನು ಬಹಳ ಸಂತೋಷ ಹೊಂದಿದ್ದೇನೆ, ಅವರು ಶಾರೂಕ್ ಖಾನ್ ಅವರನ್ನು ರಕ್ತಸಿಕ್ತ, ರೋಮಾಂಚನಗೊಳಿಸುವ ಶತ್ರುತ್ವದಿಂದ ಈ ಮಹತ್ತರ ಚಿತ್ರವನ್ನು ಪ್ರತಿಯೊಂದು ಅರ್ಥದಲ್ಲೂ ಹೊ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ. ಜಾನ್ ಪಠಾಣ್‌ನ ಪರಿಪೂರ್ಣ ಖಳರಾಗಿದ್ದಾರೆ ಮತ್ತು ಅವರ ಶತ್ರುತ್ವ ಪ್ರೇಕ್ಷಕರನ್ನು ಸೀಟಿನ ಅಂಚಿನಲ್ಲಿ ಕೂರಿಸುತ್ತದೆ. ಇದು ಥ್ರಿಲ್ಲಿಂಗ್ ಮುಖಾಮುಖಿಯ ಒಂದು ಅದ್ಭುತವಾಗಲಿದೆ” ಎಂದರು.

ಪಠಾಣ್ ಜನವರಿ 25, 2023ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ.

Gayathri SG

Recent Posts

ಯುಎಇ ರಾಯಲ್‌ ಮನೆತನದ ಸದಸ್ಯನ ನಿಗೂಢ ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…

1 hour ago

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

1 hour ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

2 hours ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

3 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

3 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

4 hours ago