‘ಝೂಮೆಜೊ ಪಠಾಣ್‌ಗೀತೆಯು ಪಠಾಣ್‌ನ ಸ್ಟೈಲ್ ಮತ್ತು ವ್ಯಕ್ತಿತ್ವದ ಸಂಭ್ರಮಾಚರಣೆ’: ಸಿದ್ಧಾರ್ಥ್ ಆನಂದ್

ಪಠಾಣ್ ಪ್ರೇಕ್ಷಕರಿಗೆ ಭಾರತದ ಅತ್ಯಂತದೊಡ್ಡಆ್ಯಕ್ಷನ್‌ ಚಿತ್ರವಾಗಲಿದೆ. ಈ ಅದ್ಭುತ ದೃಶ್ಯ ವೈಭವದ ಯಶ್‌ರಾಜ್ ಫಿಲ್ಮ್  ಅವರ ಆ್ಯಕ್ಷನ್‌ಅದ್ಭುತ ಪಠಾಣ್, ಆದಿತ್ಯ ಛೋಪ್ರಾ ಅವರ ಮಹತ್ವಾಕಾಂಕ್ಷೆಯ ಗೂಢಚರ್ಯೆ ವಿಶ್ವವನ್ನು ಹಾಗೂ ದೇಶದ ಅತ್ಯಂತ ದೊಡ್ಡ ಸೂಪರ್‌ ಸ್ಟಾರ್‌ಗಳಾದ ಶಾರೂಕ್‌ಖಾನ್, ದೀಪಿಕಾ ಪಡುಕೋಣೆ ಮತ್ತುಜಾನ್‌ ಅಬ್ರಹಾಂ ಅವರನ್ನು ಒಳಗೊಂಡಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ರೋಮಾಂಚಕ, ದೃಶ್ಯ ವೈಭವದ ಚಲನ ಚಿತ್ರವು ಜನವರಿ 25, 2023ರಂದು ಹಿಂದಿ, ತಮಿಳು ಮತ್ತುತೆಲುಗು ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ನಿರ್ಮಾಪಕರು ಈ ಚಲನ ಚಿತ್ರದ ಎರಡನೆಯ ಗೀತೆಯ ಫಸ್ಟ್ ಲುಕ್‌ ಅನ್ನು ಬಿಡುಗಡೆ ಮಾಡಿದ್ದು ಝೂಮೆಜೊ ಪಠಾಣ್ ಎಂಬ ಗೀತೆಯಲ್ಲಿ ಶಾರೂಕ್‌ಖಾನ್ ಮತ್ತು ದೀಪಿಕಾ ಪಡುಕೋಣೆ ಅದ್ಭುತ ಸೌಂದರ್ಯದಿಂದ ಕಾಣುತ್ತಿದ್ದಾರೆ!

ಡಿಸೆಂಬರ್ 22ರಂದು ಈ ಗೀತೆ ಬಿಡುಗಡೆ ಮಾಡುವ ಕುರಿತು ಸಿದ್ಧಾರ್ಥ್, “ಝೂಮೆಜೊ ಪಠಾಣ್‌ಗೀತೆಯು ಪಠಾಣ್ ಸ್ಫೂರ್ತಿಗೆ ನೀಡಿದ ಗೌರವವಾಗಿದ್ದುಇದರಲ್ಲಿ ಅಸಾಮಾನ್ಯ ನಟ ಶಾರೂಕ್‌ಖಾನ್ ನಟಿಸಿದ್ದಾರೆ. ಈ ಗೀತೆಯು ಈ ಸೂಪರ್ ಸ್ಟೈಲ್ ನ ವ್ಯಕ್ತಿತ್ವದ ಗುಣಗಳನ್ನು ಮೈವೆತ್ತಿದ್ದು ಸೋಂಕಿನಂತೆ ಹರಡಬಲ್ಲ ವಿನೂತನ ಆಕರ್ಷಣೆ ಹೊಂದಿದೆ. ಅವರ ಶಕ್ತಿ, ಅವರ ಕಂಪನ, ಅವರ ವಿಶ್ವಾಸದಿಂದಯಾರೇ ಆಗಲಿ ಈ ಟ್ಯೂನ್‌ಗೆಕುಣಿಯುವಂತೆ ಮಾಡುತ್ತಾರೆ” ಎಂದಿದ್ದಾರೆ.

ಅವರು, “ಈ ಗೀತೆಯು ಶಾರೂಕ್‌ಖಾನ್ ಮತ್ತು ದೀಪಿಕಾ ಪಡುಕೋಣೆಅವರನ್ನು ಒಳಗೊಂಡಿದೆ. ಈ ಗೀತೆಯು ಕವ್ವಾಲಿಯ ಆಧುನಿಕ ಫ್ಯೂಷನ್ ಮತ್ತು ಪಠಾಣ್‌ನ ಸ್ಟೈಲ್ ಮತ್ತು ವಿಶ್ವಾಸದ ಸಂಭ್ರಮಾಚರಣೆಯಾಗಿದೆ. ಎಸ್‌ಆರ್‌ಕೆ ಇಂತಹ ಸಂಗೀತದಲ್ಲಿ ಕಾಣಿಸಿಕೊಂಡು ಬಹಳ ದಿನಗಳಾಗಿದ್ದವು ಮತ್ತು ಜನರು ಅವರ ಅಚ್ಚುಮೆಚ್ಚಿನ ಸೂಪರ್‌ಸ್ಟಾರ್ ನೃತ್ಯ ಮಾಡುವುದನ್ನು ನೋಡಲು ಇಷ್ಟ ಪಡುತ್ತಾರೆ” ಎಂದರು.

ಸಿದ್ಧಾರ್ಥ್, “ಝೂಮೆಜೊ ಪಠಾಣ್‌ನಲ್ಲಿ ದೀಪಿಕಾ ಪಡುಕೋಣೆ ಅವರನ್ನು ಒಳಗೊಂಡಿದ್ದು ಅದ್ಭುತವಾಗಿ ಕಾಣುತ್ತಾರೆ. ಬೆಳ್ಳಿತೆರೆಯ ಮೇಲೆ ಅವರಜೋಡಿ ಮಿಂಚು ಹರಿಸುವಂತಿದ್ದು ವಿಶ್ವದಾದ್ಯಂತ ಈ ಗೀತೆಯು ಎಸ್‌ಆರ್‌ಕೆ ಮತ್ತು ದೀಪಿಕಾ ಅವರನ್ನುಅಚ್ಚುಮೆಚ್ಚಿನ ಜೋಡಿಯಾಗಿ ಇಷ್ಟಪಡುವವರಿಗೆ ಅದ್ಭುತವಾದ ರಂಜನೆ ನೀಡುತ್ತದೆ” ಎಂದರು.

ಎಸ್‌ಆರ್‌ಕೆ ಮತ್ತು ದೀಪಿಕಾ ಭಾರತೀಯ ಚಲನಚಿತ್ರ ಇತಿಹಾಸದಲ್ಲಿಯೇ ಅತ್ಯಂತದೊಡ್ಡ ಬೆಳ್ಳಿತೆರೆಯ ಜೋಡಿಯಾಗಿದ್ದು ಓಂ ಶಾಂತಿ ಓಂ, ಚೆನ್ನೈ ಎಕ್ಸ್ಪ್ರೆಸ್ ಮತ್ತು ಹ್ಯಾಪಿ ನ್ಯೂಇಯರ್‌ನಂತಹ ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ್ದಾರೆ.

Gayathri SG

Recent Posts

ದ.ಕ ಬರ ಪರಿಸ್ಥಿತಿ ಹಿನ್ನಲೆ ನೀರು ಪೂರೈಕೆಗೆ ಜಿಲ್ಲಾಡಳಿತ ಮುಂಜಾಗೃತ ಕ್ರಮ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಸಾರ್ವಜನಿಕರಿಗರ ಕುಡಿಯುವ ನೀರನ್ನು ಪೂರೈಸಲು ಜಿಲ್ಲಾಡಳಿತದಿಂದ ಈಗಾಗಲೇ ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ.…

2 mins ago

ಕಲ್ಲಡ್ಕದಲ್ಲಿ ಪ್ರಥಮ ಮಳೆಗೆ ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ : ಸಂಚಾರ ಅಸ್ತವ್ಯಸ್ತ

ನಿನ್ನೆ ಸುರಿದ ಪ್ರಥಮ ಮಳೆಗೆ ಕಲ್ಲಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೊಡುಕುಂಟಾಗಿದೆ.

7 mins ago

ಡಾಲರ್‌ ಮೌಲ್ಯದ ಚಿನ್ನ ದರೋಡೆ ಪ್ರಕರಣ: ಭಾರತೀಯ ಮೂಲದ ವ್ಯಕ್ತಿ ಬಂಧನ

ಕೆನಡಾದಲ್ಲಿ ಬಹುಕೋಟಿ ಡಾಲರ್‌ ಮೌಲ್ಯದ ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ವ್ಯಕ್ತಿಯನ್ನು ಟೊರೊಂಟೋ ವಿಮಾನ ನಿಲ್ದಾಣದಲ್ಲಿ ಅರೆಸ್ಟ್‌…

20 mins ago

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ : ಆನ್‌ಲೈನ್‌ನಲ್ಲಿ ಹೀಗೆ ನೋಡಿ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದೆ. ಈ ವರ್ಷದ ತೇರ್ಗಡೆ ಪ್ರಮಾಣ…

29 mins ago

ಪತ್ರಿಕಾ ವಿತರಕ ರೈಲಿಗೆ ಸಿಲುಕಿ ಆತ್ಮಹತ್ಯೆ

ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದ ಬಳಿ ನಡೆದಿದೆ.

43 mins ago

ಮಲೆ ಮಾದಪ್ಪನಿಗೆ ಬೆಳ್ಳಿ ಆರತಿ ತಟ್ಟೆ ನೀಡಿದ ದಾನಿ : ಹೇಗಿದೆ ಗೊತ್ತಾ?

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಪವಾಡ ಪುರುಷ ಶ್ರೀ ಮಲೆ ಮಹದೇಶ್ವರನಿಗೆ ಬೆಂಗಳೂರಿನ ನಾಗಮಣಿ.ಎಂ ಮತ್ತು ಕುಟುಂಬ 01 ಕೆಜಿ…

52 mins ago