News Karnataka Kannada
Monday, April 29 2024
ಬಾಲಿವುಡ್

ಮೊದಲ ಬಾರಿ ಮಗಳ ಮುಖ ತೋರಿಸಿದ ಆಲಿಯಾ-ರಣಬೀರ್ ದಂಪತಿ : ವೀಡಿಯೋ ವೈರಲ್‌

New Project 2023 12 25t171117.945
Photo Credit : News Kannada

ಮುಂಬೈ: ನಟಿ ಆಲಿಯಾ ಭಟ್​ ಮತ್ತು ನಟ ರಣಬೀರ್​ ಕಪೂರ್​ ದಂಪತಿ ಮಗಳ ಮುಖವನ್ನು ಮೊದಲ ಬಾರಿಗೆ ತೋರಿಸಿದ್ದಾರೆ. ಮಾಧ್ಯಮಗಳ ಕ್ಯಾಮೆರಾ ಎದುರು ಮಗಳ ಜೊತೆ ಪೋಸ್​ ನೀಡಿದ್ದಾರೆ. ಸದ್ಯ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್​ ಆಗಿವೆ. ಸಖತ್​ ಕ್ಯೂಟ್​ ಆಗಿರುವ ರಹಾ ಮುಖವನ್ನು ಕಂಡು ಅಭಿಮಾನಿಗಳಿಗೆ ಫುಲ್‌ ಖುಷಿಯಾಗಿದ್ದಾರೆ.

ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ಮುಂಬೈನ ಜುಹೂನಲ್ಲಿ ಕಪೂರ್​ ಕುಟುಂಬದವರು ಔತಣ ಕೂಟ ಭಾಗಿಯಾದ ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅವರು ಮಗಳನ್ನು ಕೂಡ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಅವರು ಪುತ್ರಿಯ ಮುಖವನ್ನು ತೋರಿಸಿದ್ದಾರೆ.

ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರು ಪರಸ್ಪರ ಪ್ರೀತಿಸಿ, 2022ರ ಏಪ್ರಿಲ್​ 14ರಂದು ಮದುವೆಯಾದರು. ಅದೇ ವರ್ಷ ನವೆಂಬರ್​ 6ರಂದು ಹೆಣ್ಣು ಮಗುವಿಗೆ ಆಲಿಯಾ ಭಟ್​ ಜನ್ಮ ನೀಡಿದರು. ಅವರು ಮನೆಯಲ್ಲಿ ಮಗಳನ್ನು ಹಲವು ಹೆಸರುಗಳಿಂದ ಕರೆಯುತ್ತಿದ್ದಾರೆ. ರಹು, ರಾರಾ, ಲಾಲಿಪಾಪ್ ಅಂತ ಮಗಳನ್ನು ಮುದ್ದಾಗಿ ಕರೆಯುತ್ತೇವೆ ಎಂದು ಇತ್ತೀಚಿಗೆ ಆಲಿಯಾ ಭಟ್​ ಹೇಳಿದ್ದರು.

https://www.instagram.com/varindertchawla/?utm_source=ig_embed&ig_rid=7f3f2784-b9b8-4206-bde9-22739f796b5a

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು