ಬಾಲಿವುಡ್

ಕಠ್ಮಂಡುನಲ್ಲಿ ‘ಆದಿಪುರುಷ್’ ಸಿನಿಮಾ ಬ್ಯಾನ್

ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾದ ಡೈಲಾಗ್ ಗಳು ವಿವಾದಕ್ಕೆ ಕಾರಣವಾಗಿದೆ. ಈಗಾಗ್ಲೆ ಚಿತ್ರವನ್ನು ಬ್ಯಾನ್ ಮಾಡುವಂತೆ ಹಲವು ಸಂಘಟನೆಗಳು ಮನವಿ ಮಾಡಿವೆ. ಇದೀಗ ಚಿತ್ರದಲ್ಲಿ ಸೀತೆಯನ್ನು ಭಾರತದ ಮಗಳು ಎಂದು ಕರೆದ ಡೈಲಾಗ್ ಕುರಿತಂತೆ ಕಠ್ಮಂಡು ಮೇಯರ್ ಆಕ್ಷೇಪ ವ್ಯಕ್ತ ಪಡಿಸಿದ್ದು, ಸಿನಿಮಾದಲ್ಲಿ ಸುಳ್ಳು ಇತಿಹಾಸವನ್ನು ಹೇಳಿದ್ದಕ್ಕೆ ಚಿತ್ರವನ್ನು ಕಠ್ಮಂಡುವಿನಲ್ಲಿ ಬ್ಯಾನ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದುವರೆಗೂ ಚಿತ್ರದಲ್ಲಿ ಡೈಲಾಗ್ ಬದಲಾವಣೆ ಮಾಡದ ಕಾರಣದಿಂದಾಗಿ ಕಠ್ಮಂಡು ಮೇಯರ್ ಮತ್ತೊಂದು ಸುತ್ತೋಲೆ ಹೊರಡಿಸಿದ್ದಾರೆ. ಕಠ್ಮಂಡುನಲ್ಲಿ ಒಟ್ಟು 17 ಚಿತ್ರಮಂದಿರಗಳಿದ್ದು, ಈ ಅಷ್ಟೂ ಚಿತ್ರಮಂದಿರಗಳಲ್ಲೂ ಭಾರತೀಯ ಸಿನಿಮಾಗಳನ್ನು ಪ್ರದರ್ಶನ ಮಾಡಬಾರದು ಎಂದು ಆದೇಶ ಹೊರಡಿಸಿರುವುದಾಗಿ ಮೇಯರ್ ಬಲೇನ್ ಶಾ ಟ್ವೀಟ್ ಮೂಲಕ ತಿಳಿಸಿದ್ದಾರೆ. ಆದಿಪುರುಷ ಸಿನಿಮಾ ಸೇರಿದಂತೆ ಭಾರತದ ಅಷ್ಟೂ ಸಿನಿಮಾಗಳನ್ನೂ ಬ್ಯಾನ್ ಮಾಡಿರುವುದಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Ashitha S

Recent Posts

ಆರ್‌ಸಿಬಿ ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯ: ಸೈಬರ್‌ ಖದೀಮರಿಂದ ವಂಚನೆ

ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ…

12 mins ago

ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು ಮುಂದಾದ ಸರಕಾರ

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು…

28 mins ago

ಬಹುಭಾಷೆಯಲ್ಲಿ ಡಬ್ ಆಗಿದೆ ದೊಡ್ಮನೆ ಕುಡಿಯ ‘ಯುವ’ ಸಿನಿಮಾ

ದೊಡ್ಮನೆ ಕುಡಿ ಯುವರಾಜ್‌ಕುಮಾರ್ ನಟನೆಯ ‘ಯುವ’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು ಇದೀಗ ಬಹುಭಾಷೆಯಲ್ಲಿ ಯುವ ಸಿನಿಮಾ ಡಬ್ ಆಗಿದೆ.…

48 mins ago

ಕೊನೆಯ ಸ್ಥಾನದೊಂದಿಗೆ ಐಪಿಎಲ್ ಅಂತ್ಯಗೊಳಿಸಿದ ಮುಂಬೈ ಇಂಡಿಯನ್ಸ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ  ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ  ಹಾರ್ದಿಕ್ ಪಾಂಡ್ಯ ಪಡೆ ಮುಂಬೈ ಇಂಡಿಯನ್ಸ್ ಸೋಲನುಭವಿಸಿದೆ.

1 hour ago

8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌: ಗುಡುಗು, ಮಿಂಚು ಸಹಿತ ಮಳೆ ಸಾಧ್ಯತೆ

ರಾಜ್ಯಾದ್ಯಂತ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು,  40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಿ, ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.

2 hours ago

ಸ್ವಾತಿ ಮಲಿವಾಲ್‌ ಮೇಲೆ ದೂರು ದಾಖಲಿಸಿದ ಆರೋಪಿ ಬಿಭವ್‌

ಆಪ್‌ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣದ ಆರೋಪಿಯಾಗಿರುವ ಬಿಭವ್‌ ಕುಮಾರ್‌ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ…

2 hours ago