News Karnataka Kannada
Monday, April 29 2024
ಬಾಲಿವುಡ್

ವಿದೇಶದಲ್ಲಿ ಶಾರುಖ್​ ಫ್ಯಾನ್​ ಗೆ ವಿಶೇಷ ಗೌರವ

Sharukh Khan
Photo Credit :

ಭಾರತದ ಸಿನಿಮಾಗಳು ವಿಶ್ವಾದ್ಯಂತ ಮನರಂಜನೆ ನೀಡುತ್ತವೆ. ಅದರಲ್ಲೂ ಬಾಲಿವುಡ್​ ಚಿತ್ರಗಳಿಗೆ ಮಾರುಕಟ್ಟೆ ದೊಡ್ಡದಿದೆ. ಅನೇಕ ದೇಶಗಳಲ್ಲಿ ಹಿಂದಿ ಸಿನಿಮಾಗಳನ್ನು ಜನರು ನೋಡುತ್ತಾರೆ. ವಿಶ್ವಾದ್ಯಂತ ರಿಲೀಸ್​ ಆಗುವ ಮೂಲಕ ಬಾಲಿವುಡ್​ ಚಿತ್ರಗಳು ತಮ್ಮ ವ್ಯಾಪ್ತಿ ವಿಸ್ತರಿಸಿಕೊಂಡಿವೆ. ಹಾಗಾಗಿ ಬಾಲಿವುಡ್​ ನಟರಿಗೆ ಪ್ರಪಂಚದೆಲ್ಲೆಡೆ ಫ್ಯಾನ್ಸ್​ ಇದ್ದಾರೆ. ಅದರಲ್ಲೂ ಶಾರುಖ್​ ಖಾನ್​  ಅವರನ್ನು ಅನೇಕ ವಿದೇಶಿಗರು ಇಷ್ಟಪಡುತ್ತಾರೆ. ಅದಕ್ಕೆ ಹೊಸ ಉದಾಹರಣೆಯೊಂದು ಸಿಕ್ಕಿದೆ. ಈ ಕುರಿತು ಪ್ರೊಫೆಸರ್​ ಒಬ್ಬರು ಟ್ವೀಟ್​ ಮಾಡಿದ್ದಾರೆ. ಈಜಿಪ್ಟ್​ನಲ್ಲಿ ತಮಗೆ ಆದ ಅನುಭವವನ್ನು ಅವರು ಬರೆದುಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಅನೇಕರು ತನ್ನ ಜೀವನದಲ್ಲಿ ನಡೆದ ಘಟನೆಗಳನ್ನು ಕೂಡ ಮೆಲುಕು ಹಾಕಿದ್ದಾರೆ.

ಹರಿಯಾಣದ ಅಶೋಕ ಯೂನಿವರ್ಸಿಟಿಯ ಅರ್ಥಶಾಸ್ತ್ರದ ಪ್ರೊಫೆಸರ್​ ಅಶ್ವಿನಿ ದೇಶಪಾಂಡೆ ಅವರು ಇತ್ತೀಚಗೆ ಈಜಿಪ್ಟ್​ಗೆ ತೆರಳಿದ್ದರು. ಆಗ ಅವರಿಗೆ ಒಂದು ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು. ಆಗ ಆ ವಿದೇಶಿ ನೆಲದಲ್ಲಿ ಅವರ ಸಹಾಯಕ್ಕೆ ಬಂದಿದ್ದು ಒಬ್ಬ ಶಾರುಖ್​ ಅಭಿಮಾನಿ! ಅದನ್ನು ಅಶ್ವಿನಿ ದೇಶಪಾಂಡೆ ಅವರು ಎಳೆಎಳೆಯಾಗಿ ವಿವರಿಸಿದ್ದಾರೆ.

ಈಜಿಪ್ಟ್​ನಲ್ಲಿ ಒಬ್ಬ ಟ್ರಾವೆಲ್​ ಏಜೆಂಟ್​ಗೆ ಅಶ್ವಿನಿ ದೇಶಪಾಂಡೆ ಹಣ ವರ್ಗಾವಣೆ ಮಾಡಬೇಕಿತ್ತು. ಆದರೆ ಅದಕ್ಕೆ ಕೆಲವು ಸಮಸ್ಯೆಗಳು ಎದುರಾಗಿದ್ದವು. ಆದರೆ ಆ ಟ್ರಾವೆಲ್​ ಏಜೆಂಟ್​ ಕೂಡ ಶಾರುಖ್​ ಖಾನ್​ ಅಭಿಮಾನಿ ಆಗಿದ್ದರಿಂದ ಆತ ಸಹಾಯ ಮಾಡಿದ. ‘ನೀವು ಶಾರುಖ್​ ಖಾನ್​ ಅವರ ದೇಶದವರು. ಹಾಗಾಗಿ ನಿಮ್ಮನ್ನು ನಾನು ನಂಬುತ್ತೇನೆ. ಮೊದಲು ನಿಮಗೆ ಬುಕಿಂಗ್​ ಮಾಡುತ್ತೇನೆ. ನಂತರ ಯಾವಾಗ ಬೇಕಿದ್ದರೂ ನೀವು ಹಣ ನೀಡಿ. ಶಾರುಖ್​ ಖಾನ್​ ಮೇಲಿನ ಅಭಿಮಾನಕ್ಕಲ್ಲದೇ ಬೇರೆ ಯಾವ ಕಾರಣಕ್ಕೂ ನಾನು ಈ ಸಹಾಯ ಮಾಡುತ್ತಿರಲಿಲ್ಲ’ ಅಂತ ಆತ ಹೇಳಿದ ಎಂದು ಅಶ್ವಿನಿ ದೇಶಪಾಂಡೆ ಟ್ವೀಟ್​ ಮಾಡಿದ್ದಾರೆ.

ಅಶ್ವಿನಿ ಅವರ ಟ್ವೀಟ್​ ಕಂಡು ಶಾರುಖ್​ ಅಭಿಮಾನಿಗಳು ಖುಷಿ ಆಗಿದ್ದಾರೆ. ತಾವೂ ಸಹ ವಿದೇಶಕ್ಕೆ ಹೋದಾಗ ಇದೇ ರೀತಿಯ ಘಟನೆಗಳು ನಡೆದಿದ್ದವು ಎಂಬುದನ್ನು ಅವರೆಲ್ಲ ಕಮೆಂಟ್​ಗಳ ಮೂಲಕ ತಿಳಿಸಿದ್ದಾರೆ. ಒಟ್ಟಿನಲ್ಲಿ ವಿದೇಶದಲ್ಲಿ ಶಾರುಖ್​ ಹವಾ ಹೇಗಿದೆ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ.

ಸದ್ಯ ಶಾರುಖ್​ ಖಾನ್​ ಅವರು ‘ಪಠಾಣ್​’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಪುತ್ರ ಆರ್ಯನ್​ ಖಾನ್​ ಡ್ರಗ್ಸ್​ ಪ್ರಕರಣದಲ್ಲಿ ಸಿಲುಕಿಕೊಂಡ ಬಳಿಕ ಶಾರುಖ್​ ಕೊಂಚ ಮಂಕಾಗಿದ್ದರು. ಇತ್ತೀಚೆಗೆ ಅವರು ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ. ಶೂಟಿಂಗ್​ ಸೆಟ್​ಗೆ ಬಂದ ಅವರ ಫೋಟೋಗಳು ಸಖತ್​ ವೈರಲ್​ ಆಗಿದ್ದವು. ಒಮಿಕ್ರಾನ್​ ಕಾರಣದಿಂದ ‘ಪಠಾಣ್​’ ಚಿತ್ರದ ಕೆಲಸಗಳು ಮತ್ತೆ ವಿಳಂಬ ಆಗುವ ಸಾಧ್ಯತೆ ಇದೆ. ಈ ವಿಷಯ ಕೇಳಿ ಶಾರುಖ್​ ಫ್ಯಾನ್ಸ್​ ಬೇಸರ ಮಾಡಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು