ಬಾಲಿವುಡ್​​ ನಟ ಅಮಿತಾಭ್ ಬಚ್ಚನ್ ನಿವಾಸ ಸೇಲ್

ಬಾಲಿವುಡ್​​ ನಟ ಅಮಿತಾಭ್ ಬಚ್ಚನ್ ಹಲವೆಡೆ ಆಸ್ತಿಪಾಸ್ತಿ ಹೊಂದಿದ್ದಾರೆ. ಇದೀಗ ಅವರು ದೆಹಲಿಯಲ್ಲಿದ್ದ ನಿವಾಸವನ್ನು ಮಾರಾಟ ಮಾಡಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ. ಬಾಲಿವುಡ್​ನ ಹಿರಿಯ ನಟ ಅಮಿತಾಭ್ ಬಚ್ಚನ್ ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ.

ಅವರ ಪೋಷಕರೂ ಕೂಡ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. ಅಮಿತಾಭ್ ತಾಯಿ ತೇಜಿ ಬಚ್ಚನ್ ಹಾಗೂ ತಂದೆ ಹರಿವಂಶ್ ರಾಯ್ ಮೊದಲಿಗೆ ದೆಹಲಿಯಲ್ಲಿ ವಾಸವಾಗಿದ್ದರು. ಮುಂಬೈಗೆ ಬರುವ ಮುನ್ನ ಅಮಿತಾಭ್ ಕೂಡ ತಮ್ಮ ಪೋಷಕರೊಂದಿಗೆ ದೆಹಲಿಯಲ್ಲಿದ್ದರು. ಇದೀಗ ಬಿಗ್​ಬಿ ದೆಹಲಿಯ ಆ ನಿವಾಸವನ್ನು ಮಾರಿದ್ದಾರೆ.​ ಈಗಾಗಲೇ ಮುಂಬೈನಲ್ಲಿ ಹಲವು ಆಸ್ತಿ ಹೊಂದಿರುವ ಅಮಿತಾಭ್, ದೆಹಲಿಯಲ್ಲಿರುವ ನಿವಾಸ ಮಾರಲು ಮನಸ್ಸು ಮಾಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಮಾರಾಟ ಪ್ರಕ್ರಿಯೆ, ನೋಂದಣಿ ಕಾರ್ಯಗಳು ಎಲ್ಲವೂ ಮುಕ್ತಾಯವಾಗಿದೆ. ದೆಹಲಿಯ ಗುಲ್​ಮೊಹರ್ ಪಾರ್ಕ್​ನಲ್ಲಿರುವ ಅಮಿತಾಭ್ ನಿವಾಸ ‘ಸೋಪಾನ್’ ಬರೋಬ್ಬರಿ ₹ 23 ಕೋಟಿಗೆ ಸೇಲ್ ಆಗಿದೆ. ಆಸ್ತಿಯನ್ನು ಖರೀದಿಸಿದ್ದು ಯಾರು? ಈ ನಿವಾಸದ ವಿಶೇಷವೇನು? ಈ ಕುರಿತ ಮಾಹಿತಿ ಇಲ್ಲಿದೆ.

‘ಸೋಪಾನ್’ ಖರೀದಿಸಿದ್ದು ಯಾರು?

ದೆಹಲಿಯ ಗುಲ್​ಮೊಹರ್​ನಲ್ಲಿರುವ ‘ಸೋಪಾನ್’ ನಿವಾಸವನ್ನು ಖರೀದಿಸಿದ್ದು ಅವ್ನಿ ಬದೇರ್ ಎಂದು ಎಕನಾಮಿಕ್ ಟೈಮ್ಸ್​ ವರದಿ ಮಾಡಿದೆ. ಅವ್ನಿ ನೆಜೋನ್ ಗ್ರೂಪ್ ಆಫ್ ಕಂಪನೀಸ್​ನ ಸಿಇಒ. ಅವ್ನಿ ಅವರಿಗೂ ಬಚ್ಚನ್ ಕುಟುಂಬಕ್ಕೂ ಬರೋಬ್ಬರಿ 35 ವರ್ಷಗಳ ಪರಿಚಯ. ವರದಿಯೊಂದರ ಪ್ರಕಾರ 418.05 ಚದರ ಮೀಟರ್ ಮನೆಯ ನೋಂದಣಿ 2021ರ ಡಿಸೆಂಬರ್ 7ಕ್ಕೆ ಪೂರ್ಣಗೊಂಡಿದೆ. ಪ್ರಸ್ತುತ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ದರಕ್ಕೆ ಅನುಗುಣವಾಗಿ, ₹ 23 ಕೋಟಿಗೆ ಅಮಿತಾಭ್ ಮನೆಯನ್ನು ಸೇಲ್ ಮಾಡಿದ್ದಾರೆ.

”ನಾವು ಇದೇ ಜಾಗದಲ್ಲಿ ವಾಸಿಸುತ್ತಿದ್ದೇವೆ. ಇಲ್ಲೇ ಸುತ್ತಮುತ್ತ ಹೊಸ ಜಾಗವಿದ್ದರೆ ಬೇಕಾಗಿತ್ತು. ಅಮಿತಾಭ್ ಮನೆ ಮಾರಾಟದ ಆಫರ್ ಮಾಡಿದಾಗ ಹಿಂದೆ ಮುಂದೆ ಯೋಚಿಸದೇ ಎಸ್ ಎಂದಿದ್ದೆವು” ಎಂದು ಅವ್ನಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಅಮಿತಾಭ್ ಅವರಿಂದ ಖರೀದಿಸಿರುವುದು ಹಳೆಯ ಮನೆಯಾಗಿದ್ದು, ಅದನ್ನು ಕೆಡವಿ ಅದೇ ಜಾಗದಲ್ಲಿ ಹೊಸದಾಗಿ ಮನೆ ಕಟ್ಟುತ್ತೇವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಮುಂಬೈನಲ್ಲಿ ತಿಂಗಳಿಗೆ 10 ಲಕ್ಷಕ್ಕೆ ನಿವಾಸವೊಂದನ್ನು ಬಾಡಿಗೆಗೆ ನೀಡಿರುವ ಅಮಿತಾಭ್:

ಅಮಿತಾಭ್ ಬಚ್ಚನ್ ಅವರಿಗೆ ಮುಂಬೈನಲ್ಲಿ ಹಲವು ಆಸ್ತಿ ಇದೆ. ಕೆಲ ತಿಂಗಳ ಮೊದಲು ಅಮಿತಾಭ್, ಬಾಲಿವುಡ್ ತಾರೆ ಕೃತಿ ಸನೋನ್​ಗೆ ತಮ್ಮ ಒಡೆತನದ ನಿವಾಸವೊಂದನ್ನು ಬಾಡಿಗೆಗೆ ನೀಡಿದ್ದರು. ಎರಡು ವರ್ಷಗಳ ಕಾಲ ಪ್ರತಿ ತಿಂಗಳು 10 ಲಕ್ಷ ರೂ ಬಾಡಿಗೆ ಪಡೆಯುವ ಒಪ್ಪಂದಕ್ಕೆ ಅನುಗುಣವಾಗಿ ಅಮಿತಾಭ್ ಕೃತಿಗೆ ಬಾಡಿಗೆ ನೀಡಿದ್ದರು.

ಪ್ರಸ್ತುತ ಅಮಿತಾಭ್ ‘ಜುಹು’ವಿನಲ್ಲಿರುವ ತಮ್ಮ ನಿವಾಸ ‘ಜಲ್ಸಾ’ದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಇದಲ್ಲದೇ ಜುಹುವಿನಲ್ಲೇ ಪ್ರತೀಕ್ಷಾ ಎಂಬ ಮನೆಯನ್ನೂ ಅಮಿತಾಭ್ ಹೊಂದಿದ್ದಾರೆ.

Gayathri SG

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

5 hours ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

5 hours ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

6 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

6 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

7 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

7 hours ago