News Karnataka Kannada
Tuesday, April 30 2024
ಬಾಲಿವುಡ್

ಪರಂ ಸುಂದರಿ ಹಾಡು ನನ್ನ ಜೀವನವನ್ನೇ ಹಾಳು ಮಾಡಿದೆ ಎಂದ ಅಭಿಮಾನಿ

Krithi Sanun
Photo Credit :

ಬಾಲಿವುಡ್​ ನಟಿ ಕೃತಿ ಸನೋನ್ ​​ರ 7 ವರ್ಷಗಳ ವೃತ್ತಿಜೀವನದಲ್ಲಿ ಮಿಮಿ ಸಿನಿಮಾ ಒಂದು ದೊಡ್ಡ ಮೈಲಿಗಲ್ಲು ಎಂದು ಹೇಳಿದರೆ ತಪ್ಪಾಗಲಾರದು. ಬಾಡಿಗೆ ತಾಯಿಯಾಗಿ ಅದ್ಭುತ ನಟನೆ ಮಾಡಿದ್ದ ಕೃತಿ ಸನೂನ್​​ ಪ್ರೇಕ್ಷಕರ ಹಾಗೂ ಸಿನಿಮಾ ವಿಮರ್ಶಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಈ ಸಿನಿಮಾದ ಪರಂ ಸುಂದರಿ ಹಾಡು ಕೂಡ ಸೋಶಿಯಲ್​ ಮೀಡಿಯಾದ ಧೂಳೆಬ್ಬಿಸಿದೆ. ಈ ಸಿನಿಮಾ ಹಾಡು ಇದೀಗ ಚರ್ಚಾ ವಿಷಯವಾಗಿದ್ದು ಅಭಿಮಾನಿಯೊಬ್ಬ ಪರಂ ಸುಂದರಿ ಹಾಡು ನನ್ನ ಜೀವನವನ್ನೇ ಹಾಳು ಮಾಡಿದೆ ಎಂದು ಹೇಳಿದ್ದಾರೆ.

ಅಭಿಮಾನಿಯ ಈ ಆರೋಪಕ್ಕೆ ಕೃತಿ ಸನೂನ್​ ನಗುತ್ತಲೇ ಉತ್ತರಿಸಿದ್ದು ಈ ಸಂಭಾಷಣೆಯ ಸ್ಕ್ರೀನ್​ಶಾಟ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಪರಂ ಚಹ್ಯಾ ಎಂಬ ಹೆಸರಿನ ವ್ಯಕ್ತಿಯು ಟ್ವಿಟರ್​ನಲ್ಲಿ ಪರಂ ಸುಂದರಿ ಹಾಡಿನ ಬಗ್ಗೆ ಬರೆದಿದ್ದಾರೆ.

ಬಾಲ್ಯದಲ್ಲಿ ಅನೇಕರು ನನ್ನ ಹೆಸರನ್ನು ಆಡಿಕೊಂಡಾಗಲೂ ನನಗೆ ಏನೂ ಅನಿಸಿರಲಿಲ್ಲ. ಆದರೆ ಯಾವಾಗ ಕೃತಿ ಸನೂನ್​​ರ ಪರಂ ಸುಂದರಿ ಹಾಡು ರಿಲೀಸ್​ ಆಯ್ತೋ ಅಂದಿನಿಂದ ನನಗೆ ಇದೇ ಹಾಡನ್ನು ಹಾಡಿ ಸ್ನೇಹಿತರು ಕಾಲೆಳೆಯುತ್ತಿದ್ದಾರೆ. ಇದನ್ನು ಯಾಕೆ ಮಾಡಿದ್ರಿ ಕೃತಿ..? ನನ್ನ ಜೀವನವನ್ನೇಕೆ ಹಾಳು ಮಾಡಿದ್ರಿ..? ಎಂದು ಫನ್ನಿಯಾಗಿ ಬರೆದಿದ್ದಾರೆ.

ಈ ಟ್ವೀಟ್​​ಗೆ ಸ್ವತಃ ಕೃತಿ ಸನೋನ್​ ಪ್ರತಿಕ್ರಿಯಿಸಿದ್ದ ಊಪ್ಸ್​.! ಸಾರಿ ಎನ್ನುವ ಮೂಲಕ ಕ್ಷಮೆಯಾಚಿಸಿದ್ದಾರೆ. ಇದು ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು