ನಟಿ ಸನ್ನಿ ಲಿಯೋನ್ ಪ್ಯಾನ್ ಕಾರ್ಡ್ ಬಳಸಿಕೊಂಡು ಎರಡು ಸಾವಿರ ರೂ. ಸಾಲ ಪಡೆದ ವ್ಯಕ್ತಿ

ನವದೆಹಲಿ, ಫೆ. 17 : ನೀಲಿ ಸಿನಿಮಾಗಳಲ್ಲೇ ಸಖತ್ ಸದ್ದು ಮಾಡುತ್ತಾ ಬಾಲಿವುಡ್ ಅಂಗಳಕ್ಕೆ ಲಗ್ಗೆಯಿಟ್ಟ ಸ್ಟಾರ್ ನಟಿ ಸನ್ನಿ ಲಿಯೋನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಂಥ ಸ್ಟಾರ್ ನಟಿಯ ಪ್ಯಾನ್ ಕಾರ್ಡ್ ಅನ್ನು ಬಳಸಿಕೊಂಡು ವ್ಯಕ್ತಿಯೊಬ್ಬ ಎರಡು ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದಾನೆ.

“ನನಗೇ ಈ ರೀತಿ ಆಗಿ ಬಿಟ್ಟಿದೆ. ಹುಚ್ಚರು. ಕೆಲವು ಮೂರ್ಖರು 2000 ರೂಪಾಯಿ ಸಾಲವನ್ನು ತೆಗೆದುಕೊಳ್ಳಲು ನನ್ನ ಪ್ಯಾನ್ ಕಾರ್ಡ್ ಅನ್ನು ಬಳಸಿಕೊಂಡಿದ್ದಾರೆ. ಇದರಿಂದ ನನ್ನ CIBIL ಸ್ಕೋರ್ (SIC) ಅನ್ನು FCK ಮಾಡಿದ್ದಾರೆ”, ಎಂದು ಸನ್ನಿ ಲಿಯೋನ್ ತಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉಲ್ಲೇಖಿಸಿದ್ದಾರೆ.

ಸ್ಟಾರ್ ನಟ ಮತ್ತು ನಟಿಯರು ತಮ್ಮ ಆಪ್ತರ ಅಂತಾ ಹೇಳಿಕೊಂಡು ವಂಚಿಸುತ್ತಿದ್ದ ಕಾಲ ಹೋಗಿದೆ. ಆನ್ ಲೈನ್ ಮೂಲಕವೇ ಬ್ಯಾಂಕ್ ಖಾತೆಗೆ ಕನ್ನ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಇಂಥವರ ಮಧ್ಯೆ ಇಲ್ಲೊಬ್ಬ ಭೂಪ ಡಿಫರೆಂಟ್ ಆಗಿ ಸುದ್ದಿ ಆಗಿದ್ದಾರೆ. ಜಸ್ಟ್ 2000 ರೂಪಾಯಿ ಸಾಲ ಪಡೆಯುವುದಕ್ಕೆ ಸನ್ನಿ ಲಿಯೋನ್ ಹೆಸರನ್ನು ಬಳಸಿಕೊಂಡಿದ್ದಾನೆ.

ಬಾಲಿವುಡ್ ನಟಿ ಸನ್ನಿ ಲಿಯೋನ್ ಪ್ಯಾನ್ ಕಾರ್ಡ್ ಅನ್ನು ಬಳಸಿಕೊಂಡಿರುವ ಆರೋಪಿ ಧಣಿ ಸ್ಟಾಕ್ಸ್ ಲಿಮಿಟೆಡ್ ಎಂಬ ಫೈನ್ಯಾನ್ಸ್ ಸಂಸ್ಥೆಯ ಮೂಲಕ 2 ಸಾವಿರ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದಾನೆ. ಈ ಕುರಿತು ವಂಚನೆ ನಡೆದಿರುವ ಬಗ್ಗೆ ನಟಿಯು ಟ್ವೀಟ್ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಸಂಸ್ಥೆಯು ಸಮಸ್ಯೆಯನ್ನು ಬಗೆಹರಿಸಿದೆ. ಈ ಕುರಿತು ಸಂಸ್ಥೆಗೆ ಸನ್ನಿ ಲಿಯೋನ್ ಧನ್ಯವಾದ ತಿಳಿಸಿದ್ದಾರೆ.

“ಇದನ್ನು ತ್ವರಿತವಾಗಿ ಸರಿಪಡಿಸಿದ್ದಕ್ಕಾಗಿ @IVLSecurities @ibhomeloans @CIBIL_Official ಅವರಿಗೆ ಧನ್ಯವಾದಗಳು. ಇಂಥ ಸಮಸ್ಯೆಗಳು ಮತ್ತೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳಿ. ಭವಿಷ್ಯದಲ್ಲಿ ಇಂಥ ಸಮಸ್ಯೆಗಳನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಎಂದು ನಾನು ತಿಳಿದುಕೊಂಡಿದ್ದೇನೆ. ಕೆಟ್ಟ CIBIL ಜೊತೆಗೆ ವ್ಯವಹರಿಸಲು ಯಾರೊಬ್ಬರೂ ಬಯಸುವುದಿಲ್ಲ,” ಎಂದು ಸನ್ನಿ ಲಿಯೋನ್ ತಮ್ಮ ಎರಡನೇ ಟ್ವೀಟ್ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.

Gayathri SG

Recent Posts

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

1 hour ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

1 hour ago

ನಂಜನಗೂಡು ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ: ವಿದ್ಯಾರ್ಥಿನಿ ಬಾಂಧವ್ಯ ತಾಲೂಕಿಗೆ ಪ್ರಥಮ ‌

ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ ಬಂದಿದ್ದು, ನಂಜನಗೂಡಿನ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿ ಬಾಂಧವ್ಯ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ…

2 hours ago

ಲೋಕಸಭೆ ಚುನಾವಣೆ: ಭಾಲ್ಕಿ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ 65.45ರಷ್ಟು ಮತದಾನ ದಾಖಲಾಗಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಭಾಲ್ಕಿಯಲ್ಲಿ ಅತಿ ಹೆಚ್ಚು…

2 hours ago

ಕುಡಿಯುವ ನೀರಿನ ಸಮಸ್ಯೆ ನಿವಾರಣೆ: ಮಲಪ್ರಭಾ ಕಾಲುವೆಗೆ ಮೇ 14 ರಿಂದ 23 ರವರೆಗೆ ನೀರು

ಮೇ 14 ರಿಂದ 23 ರವರೆಗೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಹಾಗೂ ನರಗುಂದ ಶಾಖಾ ಕಾಲುವೆ ಮೂಲಕ ನವಲಗುಂದ ಅಣ್ಣಿಗೇರಿ,…

2 hours ago

ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕ ಪ್ರಶಾಂತ್‌ ಮಾಕನೂರು ಬಂಧನ

ಎಸ್‌ಸಿ, ಎಸ್‌ಟಿ ಅನುದಾನ ಮುಸ್ಲಿಂ ಪಾಲಾಗುತ್ತಿದೆ ಎಂದು ಬಿಜೆಪಿ ತನ್ನ ಎಕ್ಸ್‌ ಖಾತೆಯನ್ನು ವಿಡಿಯೋ ಜಾಹೀರಾತು ಪ್ರಕಟಿಸಿತ್ತು. ಈ ವಿಡಿಯೋ…

3 hours ago