News Karnataka Kannada
Wednesday, May 01 2024
ಬಾಲಿವುಡ್

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಇದೀಗ ಯುಎಇ-ಸಿಂಗಾಪುರದಲ್ಲೂ ತೆರೆಕಾಣಲಿದೆ

The Kashmir Files
Photo Credit :

ಭಾರತದಲ್ಲಿ ಅಮೋಘ ಪ್ರದರ್ಶನ ಕಂಡ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಇದೀಗ ಯುಎಇ ಮತ್ತು ಸಿಂಗಾಪುರದಲ್ಲಿ ಸೆನ್ಸಾರ್ ಅನುಮತಿಯನ್ನು ಪಡೆದುಕೊಂಡಿದೆ.

‘ದಿ ಕಾಶ್ಮೀರ ಫೈಲ್ಸ್’ ಕಾಶ್ಮೀರ ಪಂಡಿತರ ನೈಜ ಘಟನೆಗಳ ಆಧಾರಿತ ಸಿನಿಮಾವಾಗಿದೆ. ಇದೀಗ ಈ ಸಿನಿಮಾ ಯಾವುದೇ ಕಡಿತವಿಲ್ಲದೆ ಯುಎಇ ಮತ್ತು ಸಿಂಗಾಪುರದಲ್ಲಿ ಚಿತ್ರವು ಸೆನ್ಸಾರ್ ಕ್ಲಿಯರೆನ್ಸ್ ಪಡೆದುಕೊಂಡಿದೆ.

ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ನೀಡಿದ ವಿವೇಕ್ ಅಗ್ನಿಹೋತ್ರಿ, ‘ಬಿಗ್ ವಿಕ್ಟರಿ: ಅಂತಿಮವಾಗಿ, ಯುಎಇಯಿಂದ ಸೆನ್ಸಾರ್ ಕ್ಲಿಯರೆನ್ಸ್ ಸಿಕ್ಕಿತು. ಯಾವುದೇ ಕಡಿತವಿಲ್ಲದೆ 15+ ರೇಟ್ ಮಾಡಲಾಗಿದೆ. ಏಪ್ರಿಲ್ 7 ರಂದು (ಗುರುವಾರ) ಸಿಂಗಾಪುರದಲ್ಲಿ ಬಿಡುಗಡೆಯಾಗುತ್ತಿದೆ’ ಎಂದು ತಿಳಿಸಿದ್ದಾರೆ .

‘ಭಾರತದಲ್ಲಿ, ಕೆಲವರು ಇದನ್ನು ಇಸ್ಲಾಮೋಫೋಬಿಕ್ ಎಂದು ಕರೆಯುತ್ತಿದ್ದಾರೆ .ಆದರೆ ಇಸ್ಲಾಮಿಕ್ ದೇಶವು 4 ವಾರಗಳ ಪರಿಶೀಲನೆಯ ನಂತರ ಅದನ್ನು 0 ಕಡಿತಗಳೊಂದಿಗೆ 15+ ರೆಟಿಂಗ್ ನೀಡಿದೆ.ಪ್ರೇಕ್ಷಕರಿಗೆ ಭಾರತದಲ್ಲಿ ಇದು 18+ ರೇಟ್ ನೀಡಲಾಗಿದೆ’. ಎಂದರು

ವಿವೇಕ್ ರಂಜನ್ ಅಗ್ನಿಹೋತ್ರಿ ಬರೆದು ನಿರ್ದೇಶಿಸಿದ ಈ ಚಿತ್ರವು ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಭಾಷಾ ಸುಂಬ್ಲಿ ಮತ್ತು ಚಿನ್ಮಯ್ ಮಾಂಡ್ಲೇಕರ್ ಸೇರಿದಂತೆ ನಟರ ತಾರಾಬಳಗವನ್ನು ಒಳಗೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು