ಡ್ರಗ್ಸ್‌ ಪ್ರಕರಣ: ಆರ್ಯನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಮುಂಬೈ ಹೈಕೋರ್ಟ್

ಡ್ರಗ್ಸ್‌ ಪ್ರಕರಣಕ್ಕೆ ಸಂಬಂದಪಟ್ಟಂತೆ ಬಾಲಿವುಡ್‌ ನಟ ಶಾರೂಖ್‌ ಪುತ್ರ ಆರ್ಯನ್‌ ಸಹಿತ ಮೂವರ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಇದೇ ವೇಳೆ ಜಾಮೀನಿಗೆ ಸಂಬಂಧಪಟ್ಟಂತೆ ಪರ-ವಿರೋಧ ವಕೀಲರ ವಾದವನ್ನು ಆಲಿಸಿದ ನ್ಯಾಯಮೂರ್ತಿ ನಿತಿನ್ ಸಾಂಬ್ರೆ , ಅರ್ಜಿಯನ್ನು ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.

ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಆರ್ಯನ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದರು. ಆರ್ಯನ್ ಪರ ಮಾಜಿ ಅಟಾರ್ನಿ ಜನರಲ್ ಮುಕುಲ್ ರೊಹಟಗಿ ವಾದ ಮಂಡಿಸಿದರು. ಆರ್ಯನ್ ಪರ ಮೊದಲು ವಾದ ಮಂಡಿಸಿದ್ದ ಸತೀಶ್ ಮಾನೆಶಿಂಧೆ ಕೂಡ ಹಾಜರಿದ್ದರು. ಎನ್​ಸಿಬಿ ಪರ ವಕೀಲ ಅನಿಲ್ ಸಿಂಗ್ ವಾದ ಮಂಡಿಸಿದರು.

ಆರ್ಯನ್ ಪರ ವಾದ ಮಂಡಿಸಿದ ಮುಕುಲ್ ರೋಹಟಗಿ, 23 ವರ್ಷದ ಆರ್ಯನ್ ಡ್ರಗ್ಸ್ ಸೇವನೆ ಮಾಡಿರಲಿಲ್ಲ. ವಿಶೇಷ ಅತಿಥಿಯಾಗಿ ಅವರನ್ನು ಪಾರ್ಟಿಗೆ ಕರೆಯಲಾಗಿತ್ತು. ಆರ್ಯನ್​ನನ್ನು ಪಾರ್ಟಿಗೆ ಆಹ್ವಾನಿಸಿದ್ದು ಪ್ರತೀಕ್​ ಗಾಬಾ. ಎನ್​​ಸಿಬಿ ದಾಳಿ ವೇಳೆ ಆರ್ಯನ್ ಖಾನ್ ಬಳಿ ಏನೂ ಸಿಕ್ಕಿಲ್ಲ. ಡ್ರಗ್ಸ್ ಸೇವಿಸಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಬಂಧಿಸುವುದಕ್ಕೆ ಯಾವುದೇ ಕಾರಣ ಕೂಡ ಇರಲಿಲ್ಲ. ಈವರೆಗೆ ಆರ್ಯನ್ ಖಾನ್‌ಗೆ ಡ್ರಗ್ಸ್‌ ಟೆಸ್ಟ್‌ ಮಾಡಿಲ್ಲ. ಆರ್ಯನ್ ಖಾನ್‌ ಬಂಧನ ಕಾನೂನುಬಾಹಿರ ಎಂದು ವಾದ ಮಂಡಿಸಿದರು.

ಬಂಧಿತರು ಯುವಕರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಿ. ಆರ್ಯನ್ ಖಾನ್‌ರನ್ನು ಮತ್ತೆ ವಿಚಾರಣೆ ನಡೆಸುವ ಅಗತ್ಯವಿಲ್ಲ. ಆರ್ಯನ್ ಖಾನ್ ಯಾವುದೇ ಫೈನಾನ್ಸ್‌ ಮಾಡಿಲ್ಲ. ವಿಶೇಷವಾಗಿ ಡ್ರಗ್ಸ್‌ ಪಾರ್ಟಿ ಕೇಸ್‌ನಲ್ಲಿ ಫೈನಾನ್ಸ್‌ ಮಾಡಿಲ್ಲ. ಸೆಕ್ಷನ್ 27A ಆರ್ಯನ್ ಖಾನ್‌ಗೆ ಅನ್ವಯಿಸುವುದಿಲ್ಲ. ಅಫೀಮು ಉತ್ಪಾದನೆಗೆ ಆರ್ಯನ್ ಹಣಕಾಸು ಒದಗಿಸಿಲ್ಲ. ಡ್ರಗ್ಸ್‌ ಕಳ್ಳಸಾಗಣೆಗಾಗಿ ಆರ್ಯನ್ ಯಾರಿಗೂ ಹಣ ನೀಡಿಲ್ಲ ಎಂದು ರೋಹಟಗಿ ವಾದ ಮಂಡಿಸಿದ್ದಾರೆ.

ಎನ್​ ಸಿಬಿ ಅಧಿಕಾರಿಗಳು ಪೊಲೀಸರಂತೆ ವರ್ತಿಸಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದೇವೆ. ಬೇರೆಯವರ ಶೂನಲ್ಲಿ ಡ್ರಗ್ಸ್ ಸಿಕ್ಕಿದರೆ ನನ್ನನ್ನು ಏಕೆ ಬಂಧಿಸಲಾಯ್ತು. ಬೇರೆಯವರ ಬಳಿ ಸಿಕ್ಕರೆ ಅದಕ್ಕೆ ನಾನು ಜವಾಬ್ದಾರನಲ್ಲ. ನನ್ನ ವಿರುದ್ಧ ಪಿತೂರಿ ಆರೋಪ ಹೊರಿಸಲಾಗಿದೆ.

ಕೆಲವು ವಾಟ್ಸ್ ಅಪ್ ಚಾಟ್ಸ್ ನನ್ನ ಮೊಬೈಲ್ ನಿಂದ ತೆಗೆಯಲಾಗಿದೆ. ಯಾವುದೇ ಸಂಭಾಷಣೆಗಳು ಕ್ರೂಸ್ ಪಾರ್ಟಿಗೆ ಸಂಬಂಧಿಸಿದ್ದಲ್ಲ. ಸದ್ಯ ದ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಸಂಭಾಷಣೆ ನಡೆಸಿಲ್ಲ. ಹಾಗಾದರೆ ಈ ಪ್ರಕರಣದಲ್ಲಿ ಪಿತೂರಿ ಹೇಗೆ ಆಗುತ್ತದೆ. ಡ್ರಗ್ಸ್ ಸೇವನೆ,ಮಾರಾಟ ಅಥವಾ ಖರೀದಿಯಲ್ಲಿ ನಾನು ಭಾಗಿಯಾಗಿಲ್ಲ ಎಂದು ರೋಹಟಗಿ ವಾದಿಸಿದ್ದಾರೆ.

Sneha Gowda

Recent Posts

ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ

ನಗರದ ಮಂಗಲಪೇಟ್‌ ಸಮೀಪದ ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ ಸಂಭ್ರಮದಿಂದ ನಡೆಯಿತು.

1 min ago

ಆಧಾರ್‌ ದುರುಪಯೋಗ: ಕರ್ನಾಟಕದಿಂದ 2.95 ಲಕ್ಷ ದೂರು ದಾಖಲು

ಜನರು ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಸೈಬರ್ ವಂಚಕರು, ಒಂದೇ ಸಂಖ್ಯೆ ಸಿಮ್‌ಗಳನ್ನು ಖರೀದಿಸಿರುವ ಸಂಬಂಧ ಟೆಲಿಕಾಂ ಅನಾಲಿಟಿಕಲ್‌ ಫಾರ್ ಫ್ರಾಡ್‌…

14 mins ago

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ: ಆರೆಂಜ್, ಯೆಲ್ಲೋ ಅಲರ್ಟ್‌ ಘೋಷಣೆ

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಪ್ರತ್ಯೇಕ ಕಡೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಸಹಿತ ಮಿಂಚು ಮತ್ತು…

31 mins ago

ಆರೋಗ್ಯದ ವೃದ್ಧಿಗೆ ಕಾಮಕಸ್ತೂರಿ ಬೀಜದ ಪಾನಕ

ಮನುಷ್ಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಅದೇ ರೀತಿ ಖಾಲಿ ಹೊಟ್ಟೆಯಲ್ಲಿ ಕಾಮಕಸ್ತೂರಿ ಬೀಜಗಳನ್ನು ಕುಡಿಯುವುದು ಬಹಳಷ್ಟು…

39 mins ago

ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ ಹೀಗಿದೆ!

ಚಿನ್ನ ಮತ್ತು ಬೆಳ್ಳಿ ಬೆಲೆ ಈ ವಾರವೂ ಏರಿಳಿತಗಳನ್ನು ಕಂಡಿದ್ದು, ಬೆಳ್ಳಿ ಬೆಲೆ ಕಳೆದ 10 ದಿನದಲ್ಲಿ ಗ್ರಾಮ್​ಗೆ 4…

59 mins ago

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆದ್ದು ಬೀಗಿದ ಆರ್​​​ಸಿಬಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್​ ಪಂದ್ಯದಲ್ಲಿ ವಿರಾಟ್…

1 hour ago