ಸಲ್ಮಾನ್ ಖಾನ್ಗೆ ದಿನದಿಂದ ದಿನಕ್ಕೆ ಏಜ್ ಕಮ್ಮಿ ಆಗ್ತಿರೋ ಹಾಗೆಯೇ ಕಾಣುತ್ತಿದೆ. ಈಗಾಗಲೇ ಸಲ್ಲು ಸುಮಾರು ಸಿನಿಮಾ ಶೂಟಿಂಗ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರ ಜೊತೆಗೆ ಮೆಗಾಸ್ಟಾರ್ ಚಿರಂಜೀವಿ ನಟನೆಯ ಗಾಡ್ಫಾದರ್ನಲ್ಲೂ ಸಲ್ಮಾನ್ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮಲಯಾಳಂನ ಲೂಸಿಫರ್ ರಿಮೇಕ್ ಆಗಿ ಗಾಡ್ ಫಾದರ್ ಆಗುತ್ತಿದೆ. ಲೂಸಿಫರ್ನಲ್ಲಿ ಪೃಥ್ವಿರಾಜ್ ನಿರ್ವಹಿಸಿದ ಪಾತ್ರವನ್ನು ಸಲ್ಮಾನ್ ಖಾನ್ ನಿಭಾಯಿಸಲಿದ್ದಾರೆ. ಫೆಬ್ರವರಿಯಲ್ಲಿ ಶೂಟಿಂಗ್ ಆರಂಭವಾಗಲಿದ್ದು, ಚಿರಂಜೀವಿ ಹಾಗೂ ಸಲ್ಮಾನ್ ಖಾನ್ರನ್ನು ತೆರೆಮೇಲೆ ನೋಡೋಕೆ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.