News Karnataka Kannada
Saturday, April 27 2024
ಬಾಲಿವುಡ್

ಕತ್ರಿನಾ ಕೈಫ್​- ವಿಕ್ಕಿ ಕೌಶಲ್​ ಮದುವೆಗೆ 100 ಬೌನ್ಸರ್​ಗಳ ನಿಯೋಜನೆ

Katrina Kaif And Vicky Kaus
Photo Credit :

ಡಿಸೆಂಬರ್​ 7ರಿಂದ 10ರವರೆಗೆ ನಡೆಯಲಿರುವ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆಗೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಅಭಿಮಾನಿಗಳಿಗೆ ಖುಷಿ ಜೊತೆಗೆ ಕುತೂಹಲ ಹೆಚ್ಚುತ್ತಿದೆ.

ಈಗಾಗಲೇರಾಜಸ್ಥಾನದ ಸವಾಯಿ ಮಾಧೋಪುರ್​ ಜಿಲ್ಲಾಧಿಕಾರಿಯಿಂದ ಮದುವೆ ಸಿದ್ಧತೆ ಕುರಿತ ಮಾಹಿತಿ ಹೊರ ಬಿದ್ದಿದೆ. ಡಿಸೆಂಬರ್​ 7ರಿಂದ 10ರವರೆಗೆ ಮದುವೆ ಕಾರ್ಯಕ್ರಮ ನಡೆಯಲಿದೆ.

ಇದೀಗ ಮತ್ತೊಂದು ಮಾಹಿತಿ ಹೊರಬಿದ್ದಿದ್ದು,ಮದುವೆಗೆ ಬೌನ್ಸರ್​ಗಳನ್ನು ನಿಯೋಜನೆ ಮಾಡಲಾಗಿದೆ.ಕತ್ರಿನಾ ಮದುವೆಗೆ 100 ಬೌನ್ಸರ್​ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.

ಕತ್ರಿನಾ ಮದುವೆಯಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ತೆಗೆಯದಂತೆ ನೋಡಿಕೊಳ್ಳಲು ಈ ಸೆಲೆಬ್ರಿಟಿ ಜೋಡಿ ಸಾಕಷ್ಟು ಮುತುವರ್ಜಿ ವಹಿಸುತ್ತಿದೆ. ತುಂಬಾನೇ ಖಾಸಗಿಯಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಹೀಗಾಗಿ, ಮದುವೆ ನಡೆಯುತ್ತಿರುವ ಪ್ರದೇಶದಲ್ಲಿ ಡ್ರೋನ್​ ಹಾರಾಟ ಕಂಡರೆ ಅದನ್ನು ಹೊಡೆದುರುಳಿಸಲು ನಿರ್ಧರಿಸಲಾಗಿದೆ. ಮದುವೆ ಮಂಟಪದಲ್ಲಿ ಬಂದ ಸೆಲೆಬ್ರಿಟಿಗಳು ಫೋಟೋ ಕ್ಲಿಕ್ಕಿಸಿದಂತೆ ನೋಡಿಕೊಳ್ಳಲು 100 ಬೌನ್ಸರ್​ಗಳು ನಿಯೋಜನೆಗೊಂಡಿದ್ದಾರೆ.

ಮದುವೆ ನಡೆಯುವ ಸ್ಥಳದಲ್ಲಿಮೊಬೈಲ್​ನಲ್ಲಿ ಯಾರೂ ಫೋಟೋ ಕ್ಲಿಕ್​ ಮಾಡದಂತೆ ನೋಡಿಕೊಳ್ಳುವ ಕೆಲಸಕ್ಕಾಗಿ 100 ಬೌನ್ಸರ್​ಗಳನ್ನು ನೇಮಕ ಮಾಡಿಕೊಂಡಿರುವ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ. ಈ ಎಲ್ಲಾ ಬೌನ್ಸರ್​ಗಳು ಜೈಪುರದಿಂದ ಬರಲಿದ್ದಾರೆ ಎಂದು ವರದಿ ಆಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು