News Karnataka Kannada
Tuesday, April 16 2024
Cricket
ಬಾಲಿವುಡ್

ವಿಮಲ್‌ ವಿವಾದ: ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಬಾಲಿವುಡ್‌ ಖ್ಯಾತ ನಟ ಅಕ್ಷಯ್‌ ಕುಮಾರ್‌

Vimal
Photo Credit :

ʼವಿಮಲ್‌ʼ ಜಾಹಿರಾತಿನಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಬಾಲಿವುಡ್‌ನ ಖಿಲಾಡಿ ಅಕ್ಷಯ್‌ ಕುಮಾರ್‌ ಇದೀಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಾನ್‌ ಮಸಾಲಾ ಬ್ರಾಂಡ್‌ನ್ನು  ಪ್ರಚಾರ ಮಾಡಿದ್ದಕ್ಕಾಗಿ ಅಭಿಮಾನಿಗಳು ಅಕ್ಷಯ್‌ ಕುಮಾರ್‌ ಅವರನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಅಭಿಮಾನ ಆಕ್ರೋಶಕ್ಕೆ ಮಣಿದ ಅಕ್ಷಯ್‌ ಬ್ರಾಂಡ್‌ ಅಂಬಾಸಿಡರ್‌ ಆಗಿರುವುದರಿಂದ ಹಿಂದೆಸರಿಯುತ್ತೇನೆ ಎಂದು ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು “ನನ್ನೆಲ್ಲಾ ಅಭಿಮಾನಿಗಳಲ್ಲಿ ನಾನು ಕ್ಷಮೆ ಕೇಳಲು ಬಯಸುತ್ತೇನೆ. ನಾನು ತಂಬಾಕು ಉತ್ಪನ್ನಗಳನ್ನು ಯಾವಾಗಲೂ ಪ್ರಚಾರ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ. ವಿಮಲ್‌ ಇಲೈಚಿಯವರೊಂದಿಗೆ ಕಾಣಿಸಿಕೊಂಡಿರುವ ಬಗ್ಗೆ ನಿಮ್ಮ ಭಾವನೆಗಳಿಗೆ ಗೌರವ ಕೊಟ್ಟು ನಾನು ಅದರಿಂದ ಹಿಂದೆ ಸರಿಯುತ್ತಿದ್ದೇನೆ. ಇಲ್ಲಿಯವರೆಗೆ ಅದರಿಂದ ಬಂದ ಹಣವನ್ನು ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸುವೆ. ಮತ್ತು ಮುಂದಿನ ದಿನಗಳಲ್ಲಿ ನನ್ನ ಆಯ್ಕೆಗಳ ಕುರಿತು ಗಮನ ಹರಿಸುತ್ತೇನೆ” ಎಂದಿದ್ದಾರೆ.

ಇತ್ತೀಚೆಗೆ ವಿಮಲ್‌ ಜಾಹಿರಾತೊಂದರಲ್ಲಿ ಅಜಯ್ ದೇವಗನ್‌ ಹಾಗೂ ಶಾರೂಕ್ ಖಾನ್‌ ಅವರೊಂದಿಗೆ ಅಕ್ಷಯ್‌ ಕಾಣಿಸಿಕೊಂಡಿದ್ದರು. ಇದರೊಟ್ಟಿಗೇ “ನಾನು ತಂಬಾಕು ಉತ್ಪನ್ನಗಳಕುರಿತು ಪ್ರಮೋಷನ್‌ ಮಾಡುವುದಿಲ್ಲ” ಎಂದು ಹೇಳಿರುವ ಅವರ ಹಳೆ ವಿಡಿಯೋಗಳು ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಜಾಹಿರಾತಿನಲ್ಲಿ ಅವರು ಏಲಕ್ಕಿ ಕುರಿತಾಗಿ ಪ್ರಚಾರ ಮಾಡಿದರೂ ಸಹ ಅಭಿಮಾನಿಗಳು ಪಾನ್‌ ಮಸಾಲಾ ತಯಾರಿಸಿವವರ ಪ್ರಚಾರ ಮಾಡಿತ್ತಿರುವ ಕುರಿತು ವಿರೋಧ ವ್ಯಕ್ತಪಡಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು