Bengaluru 22°C
Ad

Bigg BOss ಮನೇಲಿ ಕತ್ತೆ ಬಳಸುತ್ತೀರುವುದು ಸರಿಯಲ್ಲ : ಶೋ ವಿರುದ್ಧ ‘PETA’ ಆಕ್ರೋಶ

 ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್  ಕನ್ನಡ ಸೀಸನ್ 11 ವಾರದ ಹಿಂದೆ ಶುರುವಾಗಿದೆ. ಇದು ರೋಚಕವೂ ಆಗಿದೆ. ಓರ್ವ ಸ್ಪರ್ಧಿ ಕೂಡಾ ಮನೆಯಿಂದ ಹೊರ ಬಂದಿದ್ದಾರೆ. ಕನ್ನಡ ಸೇರಿದಂತೆ, ತೆಲಗು, ತಮಿಳು, ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್​ಬಾಸ್ ಎಲ್ಲಾ ಭಾಷೆಯಲ್ಲೂ ವಿಶೇಷವಾಗಿ ಜನಮನ್ನಣೆ ಪಡೆದಿರುವ ಕಾರ್ಯಕ್ರಮವಾಗಿ ಹೊರಹೊಮ್ಮುತ್ತಿದೆ.

ಮುಂಬೈ: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್  ಕನ್ನಡ ಸೀಸನ್ 11 ವಾರದ ಹಿಂದೆ ಶುರುವಾಗಿದೆ. ಇದು ರೋಚಕವೂ ಆಗಿದೆ. ಓರ್ವ ಸ್ಪರ್ಧಿ ಕೂಡಾ ಮನೆಯಿಂದ ಹೊರ ಬಂದಿದ್ದಾರೆ. ಕನ್ನಡ ಸೇರಿದಂತೆ, ತೆಲಗು, ತಮಿಳು, ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್​ಬಾಸ್ ಎಲ್ಲಾ ಭಾಷೆಯಲ್ಲೂ ವಿಶೇಷವಾಗಿ ಜನಮನ್ನಣೆ ಪಡೆದಿರುವ ಕಾರ್ಯಕ್ರಮವಾಗಿ ಹೊರಹೊಮ್ಮುತ್ತಿದೆ.

ಖ್ಯಾತ ಸೆಲೆಬ್ರಿಟಿಗಳು, ಸೋಷಿಯಲ್ ಮೀಡಿಯಾ ಪ್ರಭಾವಿಗಳು ಮತ್ತು ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ‘ಬಿಗ್ ಬಾಸ್’ ನಲ್ಲಿ ಸ್ಪರ್ಧಿಗಳಾಗಿ ಬರುತ್ತಾರೆ. ಕಾರ್ಯಕ್ರಮದ ಯಶಸ್ಸಿಗೆ ಮನೆಮಂದಿಯ ಆಯ್ಕೆ ಬಹುಮುಖ್ಯ. ಬಿಗ್ ಬಾಸ್ ಆಯೋಜಕರು ಇದಕ್ಕಾಗಿ ಸಾಕಷ್ಟು ಕಾಳಜಿ ವಹಿಸುತ್ತಾರೆ. ಆದರೆ ಈ ಬಾರಿ ಹಿಂದಿ ಬಿಗ್ ಬಾಸ್ ಮನೆಯೊಳಗೆ ಕತ್ತೆಯನ್ನೂ ಕರೆದುಕೊಂಡು ಹೋಗಲಾಗಿದೆ. ಈ ಕುರಿತಾಗಿ ವಿರೋಧ ವ್ಯಕ್ತವಾಗುತ್ತಿದೆ.

ಈ ಬಾರಿ ಹಿಂದಿ ಬಿಗ್ ಬಾಸ್ ಮನೆಯೊಳಗೆ ಕತ್ತೆಯನ್ನೂ ಕರೆದುಕೊಂಡು ಹೋಗಲಾಗಿದೆ. ಇದನ್ನು ಸಹ ಸ್ಪರ್ಧಿ ಎಂದು ಪರಿಗಣಿಸಲಾಗುತ್ತದೆ. ಈ ಬಗ್ಗೆ ಪ್ರಾಣಿ ಹಕ್ಕುಗಳ ರಕ್ಷಣಾ ವೇದಿಕೆ ‘PETA’ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇಂತಹ ರಿಯಾಲಿಟಿ ಶೋನಲ್ಲಿ ಪ್ರಾಣಿಗಳನ್ನು ಬಳಸಿಕೊಳ್ಳುವುದು ಅತ್ಯಂತ ಅಪರಾಧ ಎಂದು PETA ಸಂಘಟಕರಿಗೆ ಪತ್ರ ಬರೆದಿದೆ.

Ad
Ad
Nk Channel Final 21 09 2023