ಕನ್ನಡದ ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11 ಶುರುವಾಗಲು ತೆರೆಮರೆಯಿಂದ ತಯಾರಿ ನಡೆಯುತ್ತಿದೆ. ಸೀಸನ್-11ಕ್ಕೆ ಯಾರೆಲ್ಲ ಎಂಟ್ರಿ ಕೊಡ್ತಾರೆ ಅನ್ನೋದ್ರ ಬಗ್ಗೆ ಚರ್ಚೆ ಕೂಡ ಶುರುವಾಗ್ತಿದೆ.
ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಬಿಗ್‌ಬಾಸ್ ಕನ್ನಡದ 11 ನೇ ಸೀಸನ್ ಪ್ರಸಾರವಾಗಲಿದೆ ಎನ್ನಲಾಗ್ತಿದೆ. ಅದಕ್ಕೂ ಮುನ್ನವೇ ಕಿಚ್ಚ ಸುದೀಪ್ ಅವರು ನಿಂತುಕೊಂಡಿದ್ದ ಶೂಟಿಂಗ್ ಸೆಟ್ನಿಂದ ಫೋಟೋ ಲೀಕ್ ಆಗಿದೆ.
ಈಗಾಗಲೇ ಹೈದರಾಬಾದ್‌ನಲ್ಲಿ ಪ್ರೋಮೋ ಶೂಟಿಂಗ್ ನಡೆದಿದ್ದು, ಇದರ ಫೋಟೋ ಈಗ ಲೀಕ್ ಆಗಿದೆ. ಆದರೆ ಇದರ ಜೊತೆಗೆ ಈ ಬಾರಿಯ ಬಿಗ್‌ಬಾಸ್ ನಿರೂಪಕ ಯಾರು ಎಂಬುದಕ್ಕೂ ಸ್ಪಷ್ಟ ಮಾಹಿತಿ ಫೋಟೋದಲ್ಲಿದೆ. ಪ್ರತಿ ಬಾರಿಯಂತೆ ಈ ಬಾರಿ ಕೂಡ ಕಿಚ್ಚ ಸುದೀಪ್ ಬಿಗ್‌ಬಾಸ್ ನಿರೂಪಣೆ ಮಾಡಲಿರುವುದು ಸ್ಪಷ್ಟವಾಗಿದೆ. ಈ ಹಿಂದೆ ರಿಷಬ್ ಶೆಟ್ಟಿ ಅವರು ನಿರೂಪಣೆ ಮಾಡಲಿದ್ದಾರೆ ಎಂದು ಸುದ್ದಿಯೊಂದು ಹಬ್ಬಿತ್ತು. ಆದರೀಗ ಫೋಟೋ ಲೀಕ್ ಆಗಿ ಸ್ಪಷ್ಟ ಉತ್ತರ ಸಿಕ್ಕಿದೆ. ಇದೇ ಫೋಟೋ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.