Bengaluru 27°C
Ad

ಬಿಗ್ ಬಾಸ್ ಕನ್ನಡ 11ನೇ ಸೀಸನ್​​ ಆರಂಭಕ್ಕೆ ಕ್ಷಣಗಣನೆ!

ಬಿಗ್​ಬಾಸ್​​ ಕನ್ನಡ 11ನೇ ಸೀಸನ್​​ ಆರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಇದೇ ತಿಂಗಳು ಸೆಪ್ಟೆಂಬರ್ 29ನೇ ತಾರೀಕಿನಿಂದ ಈ ರಿಯಾಲಿಟಿ ಶೋ ಆರಂಭವಾಗಲಿದೆ.

ಬಿಗ್​ಬಾಸ್​​ ಕನ್ನಡ 11ನೇ ಸೀಸನ್​​ ಆರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಇದೇ ತಿಂಗಳು ಸೆಪ್ಟೆಂಬರ್ 29ನೇ ತಾರೀಕಿನಿಂದ ಈ ರಿಯಾಲಿಟಿ ಶೋ ಆರಂಭವಾಗಲಿದೆ. ನಟ ಸುದೀಪ್​ ಸುದ್ದಿಗೋಷ್ಠಿ ನಡೆಸಿ ಮಾತಾಡಿದ್ದಾರೆ.

ಬಿಗ್​​ಬಾಸ್ ಸಹವಾಸ​ ಸಾಕು ಅನಿಸಿದ್ದು ನಿಜ. ಅದಕ್ಕೆ ಬೇರೆಯದ್ದೇ ಕಾರಣಗಳು ಇದ್ದವು. ನಮ್ಮಗಳ ಮಧ್ಯೆ ಯಾವುದೇ ಮಸನಸ್ತಾಪ ಇರಲಿಲ್ಲ. ಇದರ ಬದಲಿಗೆ ಸಿನಿಮಾ ಕಡೆ ಒಂದಷ್ಟು ಗಮನ ನೀಡೋಣ ಎಂದಿದ್ದೆ. ಕೊನೆಗೆ ಬಿಗ್​ಬಾಸ್​ ಟೀಮ್​​​ ನನ್ನ ಮನೆಗೆ ಭೇಟಿ ನೀಡಿ ಒಪ್ಪಿಸಿದ್ದರು ಎಂದು ಸುದೀಪ್​​ ಹೇಳಿದರು.

ಬಿಗ್​ಬಾಸ್​ ನನ್ನ ಜೀವನದ ಭಾಗ ಆಗಿದೆ. ಕಳೆದ 10 ವರ್ಷಗಳಿಂದ ಬಿಗ್​ಬಾಸ್​ ನಡೆಸಿಕೊಂಡು ಬಂದಿದ್ದೇನೆ. ಹಾಗಾಗಿ ಬಿಗ್​ಬಾಸ್​ ಒಪ್ಪಿಕೊಂಡೆ ಎಂದರು. ಈ ಹಿಂದೆ ಸುದೀಪ್​ ಬಿಗ್​ಬಾಸ್​ ಶೋನಿಂದ ಹಿಂದೆ ಸರಿಯಲಿದ್ದಾರೆ ಎಂದು ಹೇಳಲಾಗಿತ್ತು. ಈಗ ಎಲ್ಲಾ ವದಂತಿಗೂ ನಟ ಸುದೀಪ್​ ಸ್ಪಷ್ಟನೆ ನೀಡಿದ್ದಾರೆ.

Ad
Ad
Nk Channel Final 21 09 2023