ಇಷ್ಟು ದಿನ ವೀಕ್ಷಕರು ಕಾತುರದಿಂದ ಕಾಯುತ್ತಿದ್ದ ಸಮಯ ಬಂದು ಬಿಟ್ಟಿದೆ. ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಓಪನಿಂಗ್ಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಬಿಗ್ಬಾಸ್ ಇತಿಹಾಸದಲ್ಲೇ ಮೊದಲು ಶೋ ಗ್ರ್ಯಾಂಡ್ ಓಪನಿಂಗ್ ಮುನ್ನವೇ ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗಿತ್ತು.
ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಯ ನಡು ನಡುವೆ ಬಿಗ್ಬಾಸ್ ಸೀಸನ್ 11ಕ್ಕೆ ಎಂಟ್ರಿ ಕೊಡುವ ಸ್ಪರ್ಧಿಗಳ ಪ್ರೋಮೋ ರಿಲೀಸ್ ಆಗಿತ್ತು. ಮೊದಲ ಪ್ರೋಮೋದಲ್ಲಿ ಮೊದಲ ಸ್ಪರ್ಧಿಯಾಗಿ ಸತ್ಯ ಸೀರಿಯಲ್ ನಟಿ ಗೌತಮಿ ಜಾಧವ್ ಎಂಟ್ರಿ ಕೊಟ್ಟಿದ್ದರು. ಎರಡನೇ ಸ್ಪರ್ಧಿಯಾಗಿ ಅಚ್ಚರಿಯ ರೀತಿಯಲ್ಲಿ ಲಾಯರ್ ಜಗದೀಶ್ ಅವರು ಎಂಟ್ರಿ ಕೊಟ್ಟಿದ್ದಾರೆ.
ಇನ್ನೂ ಯಾರು ಕೂಡ ಗೆಸ್ ಮಾಡದ ರೀತಿಯಲ್ಲಿ ಚೈತ್ರಾ ಕುಂದಾಪುರ ಅವರು ಎಂಟ್ರಿ ಕೊಟ್ಟಿದ್ದರು. ಇದೀಗ 4ನೇ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಕಾಲಿಡಲು ಸಜ್ಜಾಗಿದ್ದಾರೆ ಈ ಗೋಲ್ಡ್ ಸುರೇಶ್. ಐದನೇ ಸ್ಪರ್ಧಿಯಾಗಿ ಬಿಗ್ ಮನೆಗೆ ಯಾರು ಎಂಟ್ರಿ ಕೊಡಲಿದ್ದಾರೆ ಎಂದು ಇಂದಿನ ಗ್ರ್ಯಾಂಡ್ ಓಪನಿಂಗ್ನಲ್ಲಿ ಗೊತ್ತಾಗಲಿದೆ.
ಸದ್ಯ ಇಂದಿನಿಂದ ಬಿಗ್ಬಾಸ್ ಸೀಸನ್ 11 ಶುರುವಾಗಲಿದೆ. ಇಂದು ಸಂಜೆ 6 ಗಂಟೆಗೆ ಬಿಗ್ಬಾಸ್ ಸೀಸನ್ 11ರ ಗ್ರ್ಯಾಂಡ ಓಪನಿಂಗ್ ಇದೆ. ಪ್ರತಿ ರಾತ್ರಿ 9:30 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.