Bengaluru 28°C
Ad

ಸದ್ದಿಲ್ಲದೆ ಒಟಿಟಿಗೆ ಲಗ್ಗೆಯಿಟ್ಟ ದುನಿಯಾ ವಿಜಯ್ ಯ ‘ಭೀಮ’

Bhima

ಭೀಮ ಚಿತ್ರ ದುನಿಯಾ ವಿಜಯ್‌ ಅವರ ನಿರ್ದೇಶನದ ಎರಡನೇ ಸಿನಿಮಾ ಆಗಿದ್ದು, ಆಗಸ್ಟ್ 9 ರಂಜು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದೆ.

ಸದ್ಯ ಯಾವುದೇ ಮುನ್ಸೂಚನೆ ನೀಡದೇ, ಒಟಿಟಿಗೆ ಆಗಮಿಸಿದೆ ದುನಿಯಾ ವಿಜಯ್‌ ಅವರ ಭೀಮ ಸಿನಿಮಾ. ಸೆನ್ಸಾರ್‌ ಅಂಗಳದಿಂದ A ಪ್ರಮಾಣ ಪತ್ರ ಪಡೆದ ಭೀಮ ಸಿನಿಮಾ, ಅಮೆಜಾನ್‌ ಪ್ರೈಂನಲ್ಲಿ ಈಗಿನಿಂದಲೇ ವೀಕ್ಷಣೆ ಮಾಡಬಹುದು. ಸದ್ಯ ಇಂಗ್ಲಿಷ್‌ ಸಬ್‌ಟೈಟಲ್‌ ಜತೆಗೆ ಕನ್ನಡ ಅವತರಣಿಕೆಯಲ್ಲಿ ಮಾತ್ರ ಭೀಮ ಸ್ಟ್ರೀಮಿಂಗ್‌ ಆರಂಭಿಸಿದೆ. ಒಟಿಟಿಯಲ್ಲಿ ಬೇರೆ ಭಾಷೆಗಳಿಗೆ ಈ ಸಿನಿಮಾ ಡಬ್‌ ಆಗುವುದು ಅನುಮಾನ ಎಂದೂ ಹೇಳಲಾಗುತ್ತಿದೆ.

ಚಿತ್ರದಲ್ಲಿ ಡ್ರಗ್‌ ವ್ಯಸನವನ್ನೇ ಪ್ರಧಾನ ಕಥೆಯನ್ನಾಗಿ ಮಾಡಿಕೊಂಡ ದುನಿಯಾ ವಿಜಯ್‌ ಮತ್ತು ಅವರ ತಂಡ, ಯುವ ಪೀಳಿಗೆ ಹಾದಿ ತಪ್ಪುತ್ತಿರುವುದು ಎಲ್ಲಿ, ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಕೆಲಸ ಏನು ಎಂಬುದನ್ನು ಭೀಮ ಸಿನಿಮಾ ಮೂಲಕ ತೆರೆಮೇಲೆ ತಂದಿದ್ದಾರೆ. ಇದರ ಜೊತೆಗೆ ರೌಡಿಸಮ್‌ನ ರಕ್ತದೋಕುಳಿಯೂ ಚಿತ್ರದಲ್ಲಿ ಕಂಡು ಬಂದಿದೆ.

Ad
Ad
Nk Channel Final 21 09 2023