Ad

ಆನಂದ್ ಆಡಿಯೋ ಕೈ ಸೇರಿದ ಶಿವರಾಜ್​ಕುಮಾರ್ ನಟನೆಯ ‘ಭೈರತಿ ರಣಗಲ್ʼ

Bairathi

ಶಿವರಾಜ್​ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾ ಮೇಲೆ ದೊಡ್ಡ ಮಟ್ಟದಲ್ಲಿ ಹೈಪ್ ಸೃಷ್ಟಿ ಮಾಡಿದೆ. ಈ ಚಿತ್ರ ‘ಮಫ್ತಿ’ಯ ಪ್ರೀಕ್ವೆಲ್. ಈ ಚಿತ್ರದ ಪೋಸ್ಟರ್​ಗಳು ಮಾತ್ರ ರಿಲೀಸ್ ಆಗಿವೆ.

Ad
300x250 2

ಈಗ ಸಿನಿಮಾದ ಆಡಿಯೋ ಹಕ್ಕನ್ನು ಆನಂದ್ ಆಡಿಯೋ ಪಡೆದುಕೊಂಡಿದೆ. ಶಿವರಾಜ್​ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಜುಲೈ 12ರಂದು ಮೊದಲ ಝಲಕ್ ನೀಡುವ ಭರವಸೆ ನೀಡಿದ್ದಾರೆ.

‘ಮಫ್ತಿ’ ಸಿನಿಮಾ 2017ರಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಶಿವಣ್ಣ ಹಾಗೂ ಶ್ರೀಮುರಳಿ ಅವರ ಕಾಂಬಿನೇಷನ್ ಗಮನ ಸೆಳೆಯಿತು. ನರ್ತನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈಗ ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್​ನಲ್ಲಿ ‘ಭೈರತಿ ರಣಗಲ್’ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರವನ್ನು ಶಿವಣ್ಣ ಅವರ ಪತ್ನಿ ಗಿತಾ ಶಿವರಾಜ್​ಕುಮಾರ್ ಅವರು ‘ಗೀತಾ ಪಿಕ್ಚರ್ಸ್’ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ.

ಆನಂದ್ ಆಡಿಯೋ ಅವರು ‘ಭೈರತಿ ರಣಗಲ್’ ಹಕ್ಕನ್ನು ಪಡೆದ ಬಗ್ಗೆ ಶಿವಣ್ಣ ಟ್ವೀಟ್ ಮಾಡಿದ್ದಾರೆ. ‘ಆನಂದ್ ಆಡಿಯೋದವರು ಭೈರತಿ ರಣಗಲ್ ಆಡಿಯೋ ಹಕ್ಕನ್ನು ಪಡೆದಿದ್ದಾರೆ. ಜುಲೈ 12ರ ಬೆಳಿಗ್ಗೆ 10:10ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​ನಲ್ಲಿ ಮೊದಲ ಝಲಕ್ ನೀಡುತ್ತೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

https://x.com/NimmaShivanna/status/1810181047130406989

Ad
Ad
Nk Channel Final 21 09 2023
Ad