ಸ್ಯಾಂಡಲ್‌ವುಡ್ ನಟ ಅಭಿಷೇಕ್ ಅಂಬರೀಶ್ ಮತ್ತು ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಮುದ್ದಿನ ಪುತ್ರಿ ಅವಿವಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೆಪ್ಟೆಂಬರ್ 11ರಂದು ಅವಿವಾ ಬಿದ್ದಪ್ಪ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ಅಂಬರೀಶ್ ಜಿಪಿ ನಗರದ ನಿವಾಸದಲ್ಲಿ ಅದ್ಧೂರಿಯಾಗಿ ನಿರವೇರಿದೆ.
ಹಸಿರು ರೇಶ್ಮೆ ಸೀರೆಯಲ್ಲಿ ಅವಿವಾ ಮಿಂಚಿದ್ದಾರೆ, ಪಕ್ಕದಲ್ಲಿ ವೈಟ್ ಶೇರ್ವಾನಿ ಅದಕ್ಕೆ ಹಸಿರು ಶಾಲ್ ಧರಿಸಿ ಅಭಿಷೇಕ್ ಅಂಬರೀಶ್ ಕಾಣಿಸಿಕೊಂಡಿದ್ದಾರೆ. ಕೋಟಿ ಬೆಲೆ ಬಾಳುವ ಆಸ್ತಿ ಹೊಂದಿರುವ ಅವಿವಾ ಬಿದ್ದಪ್ಪ ಮೈ ತುಂಬಾ ಒಡವೆ ಧರಿಸಿ ಮಿಂಚುತ್ತಾರೆ ಅಂದುಕೊಂಡವರಿಗೆ ಶಾಕ್ ಕೊಟ್ಟು, ಸಖತ್ ಸಿಂಪಲ್ ಲುಕ್‌ನಲ್ಲಿ ಮಿಂಚಿದ್ದಾರೆ.
ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು ಮನೆಯಲ್ಲಿ ಗ್ರೀನ್ ಸಿಗ್ನಲ್ ಪಡೆದು 2023 ಜೂನ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ತಂದೆ ತಾಯಿಯಾಗುವ ತವಕದಲ್ಲಿದ್ದಾರೆ.
Ad