ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಬಿಟೌನ್ ಸುಂದರಿ ಜಾನ್ವಿ ಕಪೂರ್ ನೀಲಿ ಸೀರೆಯನ್ನು ಉಟ್ಟು ತುಂಬಾ ಸ್ಪೆಷಲ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತೆಲುಗು ಕೊರಟಾಲ ಶಿವ ನಿರ್ದೇಶನದ ದೇವರದಲ್ಲಿ ಸಿನಿಮಾದಲ್ಲಿ ಜಾನ್ವಿ ಕಪೂರ್ ಮೀನುಗಾರನ ಮಗಳಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ.
ಜೂನಿಯರ್ ಶ್ರೀದೇವಿ ಎಂದೇ ಜನಪ್ರಿಯರಾಗಿರುವ ಜಾನ್ವಿ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಇದೀಗ ಬ್ಲೂ ಸೀರೆಯಲ್ಲಿ ಮಿಂಚುತ್ತಿದ್ದಾರೆ.
ಜಾನ್ವಿ ಅವರ ಫೋಟೋಗಳನ್ನು ನೋಡಿದ ನೆಟ್ಟಿಗರು ಥೇಟ್ ಅಮ್ಮನಂತೆ ನೀವು ಸಖತ್ ಬ್ಯೂಟಿ, ದೀಪವಾಳಿಗೆ ಶುಭಶಾಯಗಳು ಎಂದು ಕಮೆಂಟ್ ಮಾಡ್ತಿದ್ದಾರೆ. ಈ ಚಿತ್ರದಲ್ಲಿ ಎನ್ಟಿಆರ್ ಆರ್ಆರ್ಆರ್ ನಂತರ ಬುಡಕಟ್ಟು ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಅವರ ಪಾತ್ರದ ಹೆಸರು ಈ ಚಿತ್ರದಲ್ಲಿ ತಂಗಂ ಎಂದು ಹೇಳಲಾಗುತ್ತಿದೆ.