News Karnataka Kannada
Monday, April 22 2024
Cricket
ಮನರಂಜನೆ

ಆಡಿ ಕ್ಯೂ 7 ಕಾರು ಖರೀದಿಸಿದ ಅಶ್ವಿನಿ ಪುನೀತ್​ರಾಜ್​ಕುಮಾರ್

ದಿವಂಗತ ನಟ ಪುನೀತ್ ರಾಜ್​ಕುಮಾರ್​ ನಿಧನದ ಬಳಿಕ ಪತ್ನಿ ಅಶ್ವಿನಿ ಅವರು ಎಲ್ಲ ಕೆಲಸದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದೀಗ ಐಷಾರಾಮಿ ಕಾರನ್ನು ಖರೀದಿಸುವ ಮೂಲಕ ಪುನೀತ್ ಪತ್ನಿ ಸಖತ್​ ಸುದ್ದಿಯಲ್ಲಿದ್ದಾರೆ. ಇದರ ಬೆಲೆ ಸರಿ ಸುಮಾರು 1 ಕೋಟಿ ರೂಪಾಯಿ ಆಗಿದೆ.
Photo Credit : NewsKarnataka

ದಿವಂಗತ ನಟ ಪುನೀತ್ ರಾಜ್​ಕುಮಾರ್​ ನಿಧನದ ಬಳಿಕ ಪತ್ನಿ ಅಶ್ವಿನಿ ಅವರು ಎಲ್ಲ ಕೆಲಸದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದೀಗ ಐಷಾರಾಮಿ ಕಾರನ್ನು ಖರೀದಿಸುವ ಮೂಲಕ ಪುನೀತ್ ಪತ್ನಿ ಸಖತ್​ ಸುದ್ದಿಯಲ್ಲಿದ್ದಾರೆ. ಇದರ ಬೆಲೆ ಸರಿ ಸುಮಾರು 1 ಕೋಟಿ ರೂಪಾಯಿ ಆಗಿದೆ.

ಈಗಾಗಲೇ ಪುನೀತ್ ರಾಜ್‌ಕುಮಾರ್ ಮನೆಯಲ್ಲಿ ಸಾಕಷ್ಟು ಐಷಾರಾಮಿ ಕಾರುಗಳು ಇವೆ. ಅಪ್ಪುಗೆ ಕಾರು ಕ್ರೇಜ್ ಹೆಚ್ಚಿತ್ತು. ಬಿಎಂಡಬ್ಲ್ಯೂ 730 LD, ಲ್ಯಾಂಗೋರ್ಗಿನಿ ಉರುಸ್, ಜ್ವಾಗ್ವಾರ್ XF, ರೇಂಜ್ ರೋವರ್ ವೋಗ್, ಮಿನಿ ಕೂಪರ್, ಬಿಎಂಡಬ್ಲ್ಯೂ X6 ಕಾರುಗಳಿದ್ದವು. ಇದೀಗ ಅದೇ ಸಾಲಿಗೆ ಆಡಿ Q7 ಕಾರು ಕೂಡ ಸೇರ್ಪಡೆಯಾಗಿದೆ. ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಇದು ಕೂಡ ಒಂದಾಗಿದೆ. ಹೊಸ ಕಾರನ್ನು ಖರೀದಿಸಿದ ಪುನೀತ್ ಪತ್ನಿಗೆ ಅಪ್ಪು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಈ ಕಾರು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ಭದ್ರತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಹಲವು ಏರ್ ಬ್ಯಾಗ್​ಗಳು, ಕ್ಯಾಮೆರಾ, ಅಡಾಸ್ ತಂತ್ರಜ್ಞಾನ, ರೋಡ್​ ಗ್ರಿಪ್​ನ ಹಲವು ತಂತ್ರಜ್ಞಾನಗಳನ್ನು ಒಳಗೊಂಡಿದೆ. ಜೊತೆಗೆ ಐಶಾರಾಮಿತ್ವಕ್ಕೂ ಮಹತ್ವ ನೀಡಲಾಗಿದೆ.

ಇನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್ ಕನ್ನಡ ಚಿತ್ರರಂಗದ ಸಕ್ರಿಯ ಸಿನಿಮಾ ನಿರ್ಮಾಪಕಿ. ಇತರೆ ನಿರ್ಮಾಣ ಸಂಸ್ಥೆಗಳಂತೆ ಸ್ಟಾರ್ ನಟರ ಹಾಕಿಕೊಂಡು ಸಿದ್ಧ ಮಾದರಿ ಕಮರ್ಶಿಯಲ್ ಸಿನಿಮಾಗಳನ್ನು ಮಾತ್ರವೇ ಮಾಡದೆ ಭಿನ್ನ ಕತೆಯುಳ್ಳ ಸಿನಿಮಾಗಳನ್ನು ಮಾಡುತ್ತಿದ್ದಾರೆ.

ತಮ್ಮ ನಿರ್ಮಾಣ ಸಂಸ್ಥೆ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ವಿಶೇಷವಾಗಿ ನಿರ್ದೇಶಕಿಯರಿಗೆ, ಮಹಿಳಾ ತಂತ್ರಜ್ಞರಿಗೆ ಅವಕಾಶ ನೀಡುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳನ್ನು ಸಹ ನಿರ್ಮಾಣ ಮಾಡುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು