ನಿವೇದಿತಾ ಗೌಡ-ಚಂದನ್ ಶೆಟ್ಟಿ ವಿಚ್ಛೇದನ ವಿಚಾರಕ್ಕೆ ಪ್ರಥಮ್ ಪ್ರತಿಕ್ರಿಯಿಸಿ, ಇಬ್ಬರು ಮತ್ತೆ ಒಂದಾಗಬೇಕು. ನಾನು ಚಂದನ್ ಶೆಟ್ಟಿಗೆ ಮಿಲನಾ ಫಿಲ್ಮ್ ಕ್ಲೈಮ್ಯಾಕ್ಸ್ ಕಟ್ ಮಾಡಿ ಕಳುಹಿಸುತ್ತೇನೆ. ಅದನ್ನ ನೋಡಿಯಾದರೂ ಚಂದನ್ ಮನಸ್ಸು ಬದಲಾಗಲಿ ಎಂಬ ಆಶಯವನ್ನು ಪ್ರಥಮ್ ವ್ಯಕ್ತಪಡಿಸಿದ್ದಾರೆ.
Ad
ಚಂದನ್‌ಗೆ ಕೇಳುವ ವಿವೇಚನೆ ಇದೆ. ಅರೆಂಜ್ ಮ್ಯಾರೇಜ್ ಆದರೆ ಕಂಟ್ರೋಲ್ನಲ್ಲಿ ಇರುತ್ತದೆ. ಈ ಹಿಂದೆ ಯಾವ ವಿಚ್ಚೇದನವೂ ಇರಲಿಲ್ಲ. ನಮ್ಮ ಹಿರಿಯರು ನೂರಾರು ಕಾಲ ದಾಂಪತ್ಯ ಜೀವನ ನಡೆಸಿಲ್ವಾ? ಎಂದರು.
Ad
ನಾನು ಒಳ್ಳೆಯದಾಗಲಿ ಎಂದು ಬಯಸುತ್ತೇನೆ. ನಿಮ್ಮ ನಿರ್ಧಾರ ಸರಿ ಎನ್ನುವವರು ಯಾರು ಕಷ್ಟದಲ್ಲಿ ಬರಲ್ಲ. ಹಾಳಾಗಲಿ ಎನ್ನುವವರ ಮಧ್ಯೆ ಚೆನ್ನಾಗಿ ಬದುಕು ಚಂದನ್. ಅವರಿಬ್ಬರನ್ನು ಒಂದು ಮಾಡುವಂತೆ ಜನರು ನನಗೆ ಮೆಸ್ಸೆಜ್ ಮಾಡ್ತಿದ್ದಾರೆ. ನನ್ನ ಮಾತು ಕೇಳ್ತಾರಾ ಅವರು? ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
Ad
Ad