Bengaluru 28°C
Ad

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಮದುವೆ ಸಂಭ್ರಮ : ಇಲ್ಲಿವೆ ಐಶ್ವರ್ಯಾ ಮೆಹಂದಿ ಫೋಟೋಸ್‌!

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ವಿವಾಹವಾಗುತ್ತಿದ್ದು ಹಳದಿ ಶಾಸ್ತ್ರ ಹಾಗೂ ಮೆಹಂದಿ ಕಾರ್ಯಕ್ರಮಗಳು ಚೆನ್ನೈನ ಅರ್ಜುನ್ ಸರ್ಜಾ ಮನೆಯಲ್ಲಿ ಅದ್ಧೂರಿಯಾಗಿ ನಡೆದಿವೆ.

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ವಿವಾಹವಾಗುತ್ತಿದ್ದು ಹಳದಿ ಶಾಸ್ತ್ರ ಹಾಗೂ ಮೆಹಂದಿ ಕಾರ್ಯಕ್ರಮಗಳು ಚೆನ್ನೈನ ಅರ್ಜುನ್ ಸರ್ಜಾ ಮನೆಯಲ್ಲಿ ಅದ್ಧೂರಿಯಾಗಿ ನಡೆದಿವೆ.

ನಟ ಅರ್ಜುನ್‌ ಸರ್ಜಾ ತಮ್ಮ ಹಿರಿಯ ಮಗಳು ಐಶ್ವರ್ಯಾ ಅರ್ಜುನ್‌ ಅವರ ಮದುವೆಯಲ್ಲಿ ಬ್ಯುಸಿಯಿದ್ದಾರೆ. ಶುಕ್ರವಾರ ಅದ್ದೂರಿಯಾಗಿ ಮೆಹಂದಿ ಸಮಾರಂಭ ನೆರವೇರಿದೆ. ನಟ ಹಾಗೂ ನಿರ್ದೇಶಕ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರನ್ನು ಐಶ್ವರ್ಯಾ ಅರ್ಜುನ್‌ ವಿವಾಹವಾಗಲಿದ್ದಾರೆ. ಹಲ್ದಿ ಕಾರ್ಯಕ್ರಮದೊಂದಿಗೆ ಮದುವೆ ಕೆಲಸಗಳಿಗೆ ಚಾಲನೆ ಸಿಕ್ಕಿದೆ.

ಕವರ್‌ ಮೀ ಇನ್‌ ಸನ್‌ಶೈನ್‌ ಥೀಮ್‌ನಲ್ಲಿ ಹಲ್ದಿ ಕಾರ್ಯಕ್ರಮ ನೆರವೇರಿದೆ. ತೀರಾ ಆಪ್ತರಷ್ಟೇ ಈ ಕಾರ್ಯಕ್ರಮದಲ್ಲಿದ್ದರು. ಹಳದಿ ಬಣ್ಣದ ಸಿಂಪಲ್‌ ಕುರ್ತಾ ಧರಿಸಿ ಐಶ್ವರ್ಯಾ ಮುದ್ದಾಗಿ ಕಾಣಿಸುತ್ತಿದ್ದರು.

ಐಶ್ವರ್ಯಾ ಸರ್ಜಾ ಮನೆಯಲ್ಲಿ ಮದುವೆ ಸಂಭ್ರಮ ಜೋರಿದ್ದು ಹಳದಿ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ. ಕುಟುಂಬ ಸದಸ್ಯರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ಹಳದಿ ಶಾಸ್ತ್ರದ ಹಾಗೂ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಐಶ್ವರ್ಯ ಸರ್ಜಾ ಮೆಹಂದಿ ಹಾಕಿಸಿಕೊಂಡು ಸಂಭ್ರಮಿಸಿದ್ದಾರೆ. ಐಶ್ವರ್ಯಾ ಸರ್ಜಾ ಹಾಗೂ ಉಮಾಪತಿ ಪರಸ್ಪರ ಪ್ರೀತಿಸಿ ವಿವಾಹವಾಗುತ್ತಿದ್ದಾರೆ. ಉಮಾಪತಿ ರಾಮಯ್ಯ, ತಮಿಳಿನ ಹಿರಿಯ ನಟ ತಂಬಿ ರಾಮಯ್ಯ ಅವರ ಪುತ್ರ.

ಜೂನ್ 14ರಂದು ಚೆನ್ನೈನ ಲೀಲಾ ಪ್ಯಾಲೇಸ್ ನಲ್ಲಿ ನವ ಜೋಡಿಯ ಆರತಕ್ಷತೆ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಲವು ಸಿನಿಮಾ ತಾರೆಯರು ಭಾಗಿಯಾಗಲಿದ್ದಾರೆ.

 

Ad
Ad
Nk Channel Final 21 09 2023
Ad