ಬೆಂಗಳೂರು: ರೇಣುಕಾಸ್ವಾಮಿ ಮಾಡಿರುವ ಅಶ್ಲೀಲ ಮೆಸೇಜ್‌ಗಳು ಸರಿ ಇದೆಯಾ? ಎಂದು ನಟ ಪ್ರೇಮ್ ಪ್ರಶ್ನೆ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರೇಮ್, ನಟ ದರ್ಶನ್ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಿದ್ದಾರೆ ಎನ್ನುವುದು ಎಲ್ಲೂ ಪ್ರೂವ್ ಆಗಿಲ್ಲ. ಈ ಪ್ರಕರಣದಿಂದ ದರ್ಶನ್ ಆದಷ್ಟು ಬೇಗ ಜೈಲಿನಿಂದ ಆಚೆ ಬರಲಿ. ಸಿನಿಮಾ ಇಂಡಸ್ಟ್ರಿಗೆ ದರ್ಶನ್ ಅವರ ಕೊಡುಗೆ ತುಂಬಾ ಇದೆ. ಅವರ ಮೇಲೆ ನಿರ್ಮಾಪಕರು ಕೋಟಿಗಟ್ಟಲೆ ಬಂಡವಾಳ ಹೂಡಿದ್ದಾರೆ ಎಂದರು.
ಕನ್ನಡ ಇಂಡಸ್ಟ್ರಿಯಲ್ಲಿ ಇರುವ ಕೆಲವೇ ಸೂಪರ್ ಸ್ಟಾರ್‌ಗಳಲ್ಲಿ ದರ್ಶನ್ ಕೂಡ ಒಬ್ಬರು. ಹಾಗಾಗಿ ಚಿತ್ರರಂಗಕ್ಕೆ ಅವರ ಕೊಡುಗೆ ಬೇಕಿದೆ. ಈ ಕೇಸ್ ಏನಾಗಿದೆ ಅನ್ನೋದು ಗೊತ್ತಿಲ್ಲ. ಅದು ಏನೇ ಆಗಿರಲಿ ಅವರು, ನಿರಪರಾಧಿಯಾಗಿ ಆಚೆ ಬರಲಿ ಎಂದಿದ್ದಾರೆ. ರೇಣುಕಾಸ್ವಾಮಿ ಅವರ ಇತ್ತೀಚೆಗೆ ರಿಲೀಸ್ ಆದ ಫೋಟೋ ಬಗ್ಗೆ ಗೊತ್ತಿಲ್ಲ. ಈ ಕೇಸ್ ಕಾನೂನಿನ ಚೌಕಟ್ಟಿನಲ್ಲಿದೆ ಎಂದರು.
Ad