Ad

‘ಇಂಡಿಯನ್-2‌ʼ ಚಿತ್ರವನ್ನು ಬ್ಯಾನ್ ಮಾಡುವಂತೆ‌ ಕೋರ್ಟ್‌ಗೆ ಅರ್ಜಿ

ಕಮಲ್‌ ಹಾಸನ್‌ – ಶಂಕರ್‌ ಅವರ ಪ್ಯಾನ್‌ ಇಂಡಿಯಾ ʼಇಂಡಿಯನ್‌ -2ʼ ಇದೇ ವಾರ ರಿಲೀಸ್‌ ಆಗಲಿದೆ. ಆದರೆ ಸಿನಿಮಾಕ್ಕೆ ಬ್ಯಾನ್‌ ಬಿಸಿ ತಟ್ಟಿದೆ.‘ಇಂಡಿಯನ್ 2’ ಚಿತ್ರ ತಂಡದ ವಿರುದ್ಧ ನಿಷೇಧ ಕೋರಿ ಪ್ರಕರಣವನ್ನು ದಾಖಲಿಸಲಾಗಿದೆ. ‘ವರ್ಮ ಕಲೈ’ [ತಮಿಳು ಸಾಂಪ್ರದಾಯಿಕ ಸಮರ ಕಲೆ ] ಮುಖ್ಯ ಶಿಕ್ಷಕ ಆಸನ್ ರಾಜೇಂದ್ರನ್ ಅವರು ಚಿತ್ರವನ್ನು ನಿಷೇಧ ಮಾಡಬೇಕೆಂದು ಕೇಳಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

ಚೆನ್ನೈ: ಕಮಲ್‌ ಹಾಸನ್‌ – ಶಂಕರ್‌ ಅವರ ಪ್ಯಾನ್‌ ಇಂಡಿಯಾ ʼಇಂಡಿಯನ್‌ -2ʼ ಇದೇ ವಾರ ರಿಲೀಸ್‌ ಆಗಲಿದೆ. ಆದರೆ ಸಿನಿಮಾಕ್ಕೆ ಬ್ಯಾನ್‌ ಬಿಸಿ ತಟ್ಟಿದೆ.‘ಇಂಡಿಯನ್ 2’ ಚಿತ್ರ ತಂಡದ ವಿರುದ್ಧ ನಿಷೇಧ ಕೋರಿ ಪ್ರಕರಣವನ್ನು ದಾಖಲಿಸಲಾಗಿದೆ. ‘ವರ್ಮ ಕಲೈ’ [ತಮಿಳು ಸಾಂಪ್ರದಾಯಿಕ ಸಮರ ಕಲೆ ] ಮುಖ್ಯ ಶಿಕ್ಷಕ ಆಸನ್ ರಾಜೇಂದ್ರನ್ ಅವರು ಚಿತ್ರವನ್ನು ನಿಷೇಧ ಮಾಡಬೇಕೆಂದು ಕೇಳಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

Ad
300x250 2

ಕೇರಳದ ಮಾರ್ಷಲ್ ಆರ್ಟ್ ಶಿಕ್ಷಕರಾಗಿರುವ ಆಸನ್ ರಾಜೇಂದ್ರನ್, “ನಾನು ಕಮಲ್‌ ಹಾಸನ್‌‌ ಅವರಿಗೆ ʼಇಂಡಿಯನ್‌ʼ( ಪಾರ್ಟ್‌ -1) ಗೆ ʼವರ್ಮ ಕಲೈʼ ಕಲೆಯನ್ನು ಕಲಿಸಿದ್ದೇನೆ. ಈ ಕಲೆಯ ತಂತ್ರವನ್ನು ʼಇಂಡಿಯನ್‌ -2ʼನಲ್ಲಿ ಕಮಲ್‌ ಹಾಸನ್‌ ಅವರು ಬಳಸಿಕೊಂಡಿದ್ದಾರೆ. ಚಿತ್ರತಂಡದ ಎರಡನೇ ಭಾಗದಲ್ಲಿ ನಾನು ಕಲಿಸಿದ ಕಲೆಯನ್ನು ಬಳಸಿಕೊಂಡಿದೆ. ಇದಕ್ಕೆ ನನ್ನ ಅನುಮತಿಯನ್ನು ಕೇಳಿಲ್ಲ. ಹೀಗಾಗಿ ಚಿತ್ರವನ್ನು ಬಿಡುಗಡೆಗೆ ಹಾಗೂ ಓಟಿಟಿ ರಿಲೀಸ್‌ ಗೂ ಅವಕಾಶ ನೀಡಬಾರದೆಂದು” ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

 

Ad
Ad
Nk Channel Final 21 09 2023
Ad