ಸೋಶಿಯಲ್ ಮೀಡಿಯಾದಲ್ಲಿ ಆ್ಯಂಗ್ರಿ ರ್ಯಾಂಟ್ಮ್ಯಾನ್ ಎಂದೇ ಫೇಮಸ್ ಆಗಿದ್ದ 27 ವರ್ಷದ ಅಭ್ರದೀಪ್ ಸಾಹಾ ಅವರು ನಿಧನ ಹೊಂದಿದ್ದಾರೆ.
ಸಿನಿಮಾ ವಿಮರ್ಶೆ ಮಾಡಿ ಅವರು ಫೇಮಸ್ ಆಗಿದ್ದ ಅವರಿಗೆ 4.8 ಲಕ್ಷ ಹಿಂಬಾಲಕರು ಇದ್ದರು. ಸಾಕಷ್ಟು ಜೋಶ್ನಲ್ಲಿ ಸಿನಿಮಾ ವಿಮರ್ಶೆ ಮಾಡುತ್ತಿದ್ದರು. ಇದರ ಜೊತೆಗೆ ಇತರ ವಿಡಿಯೋಗಳನ್ನು ಕೂಡ ಮಾಡುತ್ತಿದ್ದರು.
ಅವರು ‘ಕೆಜಿಎಫ್ 2’ ಸಿನಿಮಾದ ವಿಮರ್ಶೆ ಮಾಡಿದ್ದರು. ‘ರಾಕಿಭಾಯ್ ಪ್ರಧಾನಮಂತ್ರಿ ಆದರೆ ನಮ್ಮ ದೇಶ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಇರುತ್ತದೆ’ ಎಂದು ಕೂಗಿ ಹೇಳಿದ್ದರು. 10 ನಿಮಿಷಗಳ ಈ ವಿಡಿಯೋ ಬರೋಬ್ಬರಿ 17 ಲಕ್ಷ ವೀಕ್ಷಣೆ ಕಂಡಿತ್ತು.
ಆ್ಯಂಗ್ರಿ ರ್ಯಾಂಟ್ಮ್ಯಾನ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಕಳೆದ ತಿಂಗಳು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 11 ದಿನಗಳ ಹಿಂದೆ ಅವರ ತಂದೆ ಆ್ಯಂಗ್ರಿ ರ್ಯಾಂಟ್ಮ್ಯಾನ್ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದರು. ‘ನನ್ನ ಮಗ ಇನ್ನೂ ಐಸಿಯುನಲ್ಲೇ ಇದ್ದಾನೆ’ ಎಂದು ಹೇಳಿದ್ದರು.
ದಿನ ಕಳೆದಂತೆ ಆ್ಯಂಗ್ರಿ ರ್ಯಾಂಟ್ಮ್ಯಾನ್ ಆರೋಗ್ಯ ಹದಗೆಡುತ್ತಲೇ ಹೋಯಿತು. ಈಗ ಅವರು ನಿಧನ ಹೊಂದಿದ್ದಾರೆ ಎಂದು ವರದಿ ಆಗಿದೆ.