ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ತಮಿಳು ನಟ ಸೂರ್ಯ ಅವರ ತಲೆಗೆ ಸಣ್ಣ ಗಾಯವಾಗಿದ್ದು, ಈ ಘಟನೆಯ ನಂತರ ಶೂಟಿಂಗ್ ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ಸೂರ್ಯ 44 ಎಂದು ಹೆಸರಿಸಲಾದ ಸಿನಿಮಾ ಶೂಟಿಂಗ್ ವೇಳೆ ನಟನ ತಲೆಗೆ ಗಾಯವಾಗಿದೆ. ಈ ಸಿನಿಮಾವನ್ನು ಕಾರ್ತಿಕ್ ಸುಬ್ಬರಾಜು ನಿರ್ದೇಶಿಸುತ್ತಿದ್ದು, ರಾಜಶೇಖರ್ ಪಾಂಡಿಯನ್ ನಿರ್ಮಿಸುತ್ತಿದ್ದಾರೆ. ಅಭಿಮಾನಿಗಳಿಗಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ನಟನ ಕುರಿತು ಧೈರ್ಯ ತುಂಬಿದ್ದಾರೆ.
ಆಗಸ್ಟ್ 9 ರಂದು ಎಕ್ಸ್ನಲ್ಲಿ ಬರೆದುಕೊಂಡ ರಾಜಶೇಖರ್ ಪಾಂಡಿಯನ್, “ಪ್ರಿಯ #ಅನ್ಬಾನಾ ಅಭಿಮಾನಿಗಳೇ, ಇದು ಕೇವಲ ಒಂದು ಸಣ್ಣ ಗಾಯವಾಗಿದೆ. ದಯವಿಟ್ಟು ಚಿಂತಿಸಬೇಡಿ, ಸೂರ್ಯ ಅಣ್ಣ ನಿಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆಯೊಂದಿಗೆ ಸಂಪೂರ್ಣವಾಗಿ ಚೆನ್ನಾಗಿದ್ದಾರೆ” ಎಂದು ಬರೆದಿದ್ದಾರೆ.
ಸೂರ್ಯ ಅವರ ತಲೆಗೆ ಸಣ್ಣ ಗಾಯವಾಗಿದೆ. ಊಟಿಯ ವೈದ್ಯಕೀಯ ಸೌಲಭ್ಯದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರು ಚೇತರಿಸಿಕೊಳ್ಳಲು ಕೊಂಚ ಬಿಡುವುತೆಗೆದುಕೊಳ್ಳಲು ಹೇಳಿದ್ದಾರೆ. ಅದರಂತೆಯೇ ಚಿತ್ರತಂಡ ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
https://x.com/rajsekarpandian/status/1821861195605053718?