Categories: ಮನರಂಜನೆ

ವೈರಲ್‌ ಆಗುತ್ತಿದೆ ರಜನಿ, ಅಮಿತಾಭ್‌ ಫೋಟೋ ಫೋಸ್‌

ಮುಂಬೈ: ನಟ ರಜನಿಕಾಂತ್‌ ಅವರಿಗೆ ದೇಶ ವಿದೇಶಗಳಲ್ಲಿಯೂ ಅಭಿಮಾನಿಗಳ ಸಮೂಹವಿದೆ. ಇತ್ತೀಚೆಗಷ್ಟೆ ಥೇಟ್‌ ಅವರಂತೆಯೇ ಇರುವ ವ್ಯಕ್ತಿಯೊಬ್ಬರು ಕೇರಳದಲ್ಲಿ ಚಹಾ ಅಂಗಡಿ ಇಟ್ಟುಕೊಂಡಿರುವ ವಿಡಿಯೋವೊಂದು ವೈರಲ್‌ ಆಗಿತ್ತು.  ಅಂತಹ ರಜನಿಕಾಂತ್ ಗೆ ಈಗ 72 ವರ್ಷ ವಯಸ್ಸು. ಆದರೂ ಅವರಿಗೆ ಸಿನಿಮಾ ಮೇಲಿನ ಆಸಕ್ತಿ ಒಂದಿನಿತೂ ಕಡಿಮೆಯಾಗಿಲ್ಲ.

ನಟ ಅಮಿತಾಭ್​ ಬಚ್ಚನ್​ ಜೊತೆ ಅವರ ಹೊಸ ಸಿನಿಮಾ ಅನೌನ್ಸ್​ ಆಗಿತ್ತು. ಈಗ ಆ ಸಿನಿಮಾದ ಶೂಟಿಂಗ್​ ಆರಂಭ ಆಗಿದೆ. ಈ ಖುಷಿಯ ಸಂದರ್ಭದಲ್ಲಿ ಅಮಿತಾಭ್​ ಬಚ್ಚನ್ ಮತ್ತು ರಜನಿಕಾಂತ್​ ಅವರು ಜೊತೆಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿರುವ ರಜನಿಕಾಂತ್​ ಅವರು ‘ನನ್ನ ಹೃದಯ ಖುಷಿಯಿಂದ ಬಡಿದುಕೊಳ್ಳುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಈ ಫೋಟೋ ವೈರಲ್​ ಆಗುತ್ತಿದೆ.

33 ವರ್ಷಗಳ ಬಳಿಕ ನಾನು ನನ್ನ ಗುರು ಜೊತೆ ಕೆಲಸ ಮಾಡುತ್ತಿದ್ದೇನೆ’ ಎಂಬ ಕ್ಯಾಪ್ಷನ್​ ಜೊತೆಯಲ್ಲಿ ರಜನಿಕಾಂತ್​ ಅವರು ಈ ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ತಮಗಿಂತ 9 ವರ್ಷ ಹಿರಿಯರಾದ ಅಮಿತಾಭ್​ ಬಚ್ಚನ್​ಗೆ ರಜನಿಕಾಂತ್ ನೀಡಿದ ಗೌರವ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಒಟ್ಟಿನಲ್ಲಿ ಗುರುಶಿಷ್ಯರ ಫೋಟೋ ನೋಡಿ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ.

Ashika S

Recent Posts

ಇಂದು ಶಂಕರ ಜಯಂತಿ : ಶಂಕರಾಚಾರ್ಯರ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ

ಹೆಸರೇ ಸೂಚಿಸುವಂತೆ, ಆದಿ ಶಂಕರ ಜಯಂತಿಯನ್ನು ಭಾರತೀಯ ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞ ಆದಿ ಶಂಕರರ ಜನ್ಮದಿನದ ಸವಿ ನೆನಪಿಗಾಗಿ ಆಚರಿಸಲಾಗುತ್ತದೆ.…

6 mins ago

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

8 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

8 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

9 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

9 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

9 hours ago