ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿರುವ ನಟಿ ಅಮಲಾ ಪೌಲ್ ಸದ್ಯ ಮಗನ ಲಾಲನೆ-ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಓಣಂ ಹಬ್ಬದಂದು ಮಗನ ಮುಖವನ್ನು ನಟಿ ರಿವೀಲ್ ಮಾಡಿದ್ದಾರೆ.
ದೇಶದಾದ್ಯಂತ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗ್ತಿದ್ದು, ಭಾನುವಾರದಂದು ಓಣಂ ಸಂದರ್ಭದಲ್ಲಿ ನಟಿ ಅಮಲಾ ತನ್ನ ಅಭಿಮಾನಿಗಳಿಗೆ ಶುಭ ಹಾರೈಸಿದ್ರು. ತಮ್ಮ ಮಗ ಮತ್ತು ಪತಿ ಜಗತ್ ದೇಸಾಯಿ ಅವರೊಂದಿಗಿನ ಫೋಟೋಗಳನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
ನಟಿ ಅಮಲಾ ಪಾಲ್ ತಮ್ಮ ಮಗನ ಇಲೈ ಎಂದು ಹೆಸರಿಟ್ಟಿದ್ದಾರೆ. ಮಗನನ್ನು ಕೈಯಲ್ಲಿ ಹಿಡಿದುಕೊಂಡು ನಟಿ ಪತಿಯ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಬೋಟ್ನಲ್ಲಿ ಅಮಲಾ ಪೌನ್ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ.ಪತಿಯ ಜೊತೆ ಲಿಪ್ ಲಾಕ್ ಮಾಡಿರುವ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ. ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡ್ತಿದ್ದಾರೆ. ಅಮಲಾ ಮುದ್ದು ಮಗನ ಫೋಟೋಗೂ ಲೈಕ್ ಗಳ ಸುರಿಮಳೆ ಆಗ್ತಿದೆ.
ಜೂನ್ 11 ರಂದು ಅಮಲಾ ಪೌಲ್ ಗಂಡು ಮಗುವಿಗೆ ಜನ್ಮ ನೀಡಿದ್ರು, ಮಗನ ಜೊತೆಗಿನ ವಿಡಿಯೋ ಶೇರ್ ಮಾಡುವುದರ ಜೊತೆಗೆ ಮಗುವಿನ ಹೆಸರನ್ನು ಕೂಡ ನಟಿ ರಿವೀಲ್ ಮಾಡಿದ್ದರು. ಇಲೈ ಎಂದು ಅಮಲಾ ತನ್ನ ಮಗುವಿಗೆ ಹೆಸರಿಟ್ಟಿದ್ದಾರೆ. ಅಭಿಮಾನಿಗಳು ಕೂಡ ಅಮಲಾ ಪೌಲ್ಗೆ ಶುಭಾಶಯಗಳ ಸುರಿಮಳೆಗೈದಿದ್ದರು.